ಸ್ಕೇಟಿಂಗ್‌: ಏಕಾಂಶ್‌ಗೆ ಬೆಳ್ಳಿ ಪದಕ ಬೆಂಗಳೂರು:ಕರ್ನಾಟಕದಎನ್. ಏಕಾಂಶ್ ಕುಮಾರ್ ಅವರು ಭಾರತ ರೋಲರ್ ಸ್ಕೇಟಿಂಗ್ ಫೆಡರೇಷನ್‌ ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿದ್ದಾರೆ. 14ರಿಂದ 17ವರ್ಷದೊಳಗಿನವರ ವಿಭಾಗದ ಇನ್‍ಲೈನ್ ಸ್ಕೇಟಿಂಗ್‍ನ ಜೂನಿಯರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕಾಂಶ್, ಒಂದು ಸಾವಿರ ಮೀಟರ್ಸ್ ರಿಂಕ್ ರೇಸ್‍ನಲ್ಲಿ ಬೆಳ್ಳಿ ಹಾಗೂ ರಿಂಕ್ ರಿಲೇ ರೇಸ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಏಕಾಂಶ್‌, ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಏಕಾಂಶ್ ಬೆಂಗಳೂರಿನ ಅಪೋಲೋ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೊಸಕೆರೆ ಹಳ್ಳಿ ನವೀನ್ ಕುಮಾರ್ ಹಾಗೂ ಸೌಮ್ಯ ಟಿ.ಆರ್ ದಂಪತಿಯ ಪುತ್ರ. ಬೆಂಗಳೂರಿನ ಫೋರ್ಸ್ ಒನ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯರಾಗಿದ್ದು, ಪ್ರತೀಕ್ ರಾಜ ಹಾಗೂ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.