ಮಹಿಳಾ ಏಷ್ಯಾಕ‍ಪ್‌ ಹಾಕಿ ಟೂರ್ನಿ: ಜಪಾನ್‌ಗೆ ಮಣಿದ ಭಾರತ ಮಸ್ಕತ್‌: ಹಾಲಿ ಚಾಂಪಿಯನ್ ಭಾರತ ತಂಡವು ಮಹಿಳಾ ಏಷ್ಯಾಕ‍ಪ್‌ ಹಾಕಿ ಟೂರ್ನಿಯಲ್ಲಿ ಭಾನುವಾರ ಜಪಾನ್ ಎದುರು ಮಣಿಯಿತು. ‘ಎ’ ಗುಂಪಿನ ಪಂದ್ಯದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್‌ 2–0ಯಿಂದ ಭಾರತಕ್ಕೆ ಸೋಲುಣಿಸಿತು. ವಿಜೇತ ತಂಡದ ನಾಗಾ ಯೂರಿ (2ನೇ ನಿಮಿಷ) ಮತ್ತು ಸಾಕಿ ತನಕ (42ನೇ ನಿಮಿಷ) ಕಾಲ್ಚಳಕ ತೋರಿದರು. ಭಾರತ ತಂಡವು ಮುಂದಿನ ಪಂದ್ಯದಲ್ಲಿ ಸೋಮವಾರ ಸಿಂಗಪುರ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಭಾರತವು 9–0ಯಿಂದ ಮಲೇಷ್ಯಾ ತಂಡವನ್ನು ಪರಾಭವಗೊಳಿಸಿತ್ತು. ಜಪಾನ್ ತಂಡವು ಮೊದಲ ಪಂದ್ಯದಲ್ಲಿ ಸಿಂಗಪುರ ತಂಡವನ್ನು ಸೋಲಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.