ಪ್ರಜ್ಞಾನಂದಗೆ ಮಣಿದ ವಿದಿತ್‌ ವಿಜ್ಕ್ ಆನ್ ಜೀ, ನೆದರ್ಲೆಂಡ್ಸ್‌: ಮ್ಯಾರಥಾನ್ ಪಂದ್ಯದಲ್ಲಿ ಭಾರತದ ಯುವ ಗ್ರ್ಯಾಂಡ್‌ ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ವಿದಿತ್ ಸಂತೋಷ್ ಗುಜರಾತಿ ಎದುರು ಜಯ ಗಳಿಸಿದರು. ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್ ಟೂರ್ನಿಯ 10ನೇ ಸುತ್ತಿನಲ್ಲಿ ಗಳಿಸಿದ ಈ ಜಯದೊಂದಿಗೆ ಅವರು 13ನೇ ಸ್ಥಾನಕ್ಕೇರಿದರು. ಹಿಂದಿನ ಮೂರು ಪಂದ್ಯಗಳಲ್ಲಿ ಸೋತಿದ್ದ 16 ವರ್ಷದ ಪ್ರಜ್ಞಾನಂದ ತಮಗಿಂತಲೂ ಹೆಚ್ಚು ರ‍್ಯಾಂಕಿಂಗ್‌ ಹೊಂದಿರುವ ವಿದಿತ್ ಅವರನ್ನು 78 ನಡೆಗಳ ಕೊನೆಯಲ್ಲಿ ಮಣಿಸಿದರು. ಇನ್ನೂ ಎರಡು ಸುತ್ತಿನ ಪಂದ್ಯಗಳು ಬಾಕಿ ಇದ್ದು ವಿದಿತ್ ನಾಲ್ಕನೇ ಸ್ಥಾನಕ್ಕೆ ಕುಸಿದರು. ಏಳು ಪಾಯಿಂಟ್‌ಗಳೊಂದಿಗೆ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.