ಪ್ರೊ ಬಾಕ್ಸಿಂಗ್‌ಗೆ ಭಾರತದ ಸರ್ಜುಬಾಲಾ ನವದೆಹಲಿ: ಭಾರತದ ಮಹಿಳಾ ಬಾಕ್ಸರ್‌, ಒಲಿಂಪಿಯನ್‌ ಸರ್ಜುಬಾಲಾ ದೇವಿ ಅವರು ಪ್ರೊ ಬಾಕ್ಸಿಂಗ್ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಅನುಭವಿ ಕೋಚ್‌ ಮುಜ್ತಬಾ ಕಮಲ್‌ ಮತ್ತು ಇಂಫಾಲ್‌ನ ಗ್ರಾಸ್‌ರೂಟ್‌ ಬಾಕ್ಸಿಂಗ್ ಪ್ರೊಮೊಷನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮಣಿಪುರದ 28 ವರ್ಷದ ಸರ್ಜುಬಾಲಾ, 2014ರಲ್ಲಿ ಕೊರಿಯಾದಲ್ಲಿ ನಡೆದ ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಹಿಂದೆ ವಿಶ್ವ ಯೂತ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಫೆಬ್ರುವರಿ 26ರಂದು ದುಬೈನಲ್ಲಿ ನಡೆಯುವ ಬೌಟ್‌ ಮೂಲಕ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.