ಬ್ಯಾಸ್ಕೆಟ್‌ಬಾಲ್‌: ವಿಶೇಷ್‌ಗೆ ನಾಯಕತ್ವ ಬೆಂಗಳೂರು: ವಿಶೇಷ್ ಭೃಗುವಂಶಿ ಅವರು2023ರ ಫಿಬಾ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಏಷ್ಯನ್ ಅರ್ಹತಾ ಟೂರ್ನಿಗೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಅರ್ಹತಾ ಟೂರ್ನಿಯು ಇದೇ 24ರಿಂದ 28ರವರೆಗೆ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆಯಲಿದೆ. ತಂಡ ಇಂತಿದೆ: ವಿಶೇಷ ಭೃಗುವಂಶಿ(ನಾಯಕ),ಮುಯಿನ್ ಬೆಕ್ ಹಫೀಜ್‌, ಎಂ. ಅರವಿಂದ್ ಕುಮಾರ್, ಅರವಿಂದ್ ಅಣ್ಣಾದೊರೈ, ಸಹೈಜ್‌ ಪ್ರತಾಪ್ ಸಿಂಗ್ ಸೆಖೋನ್, ಮನೋಜ್ ಬಿ.ಎಂ, ಪ್ರಣವ್ ಪ್ರಿನ್ಸ್, ರಾಜೀವ್ ಕುಮಾರ್, ಪ್ರಶಾಂತ್ ಸಿಂಗ್ ರಾವತ್, ಪ್ರಿನ್ಸ್‌ಪಾಲ್ ಸಿಂಗ್‌, ಅಮೃತಪಾಲ್ ಸಿಂಗ್, ಪಾಲ್‌ಪ್ರೀತ್ ಸಿಂಗ್ ಬ್ರಾರ್. ಮುಖ್ಯ ಕೋಚ್‌: ವೆಸೆಲಿನ್ ಮ್ಯಾಟಿಕ್. ಕೋಚ್: ಪ್ರದೀಪ್ ತೋಮರ್, ಮ್ಯಾನೇಜರ್: ಮನೋಹರ ಕುಮಾರ್ ಕರುಮುತ್ತಿಲ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.