ಎಫ್‌ಐಎಚ್‌ ಲೀಗ್ ಹಾಕಿ: ಭಾರತ ತಂಡಕ್ಕೆ ಸುಖಜೀತ್ ಆಯ್ಕೆ ನವದೆಹಲಿ: ಭರವಸೆಯ ಫಾರ್ವರ್ಡ್ ಆಟಗಾರ ಸುಖಜೀತ್ ಸಿಂಗ್ ಅವರನ್ನು ಭಾರತ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೇ 26 ಮತ್ತು 27ರಂದು ಭುವನೇಶ್ವರದಲ್ಲಿ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಆಡಲಿರುವ ಮನಪ್ರೀತ್ ಸಿಂಗ್ ನಾಯಕತ್ವದ 20 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಅದರಲ್ಲಿ 25 ವರ್ಷದ ಸುಖಜೀತ್ ಸ್ಥಾನ ಗಳಿಸಿದ್ದಾರೆ. ಅನುಭವಿ ಆಟಗಾರರಾದ ಮನ್‌ಪ್ರೀತ್, ವಿವೇಕಸಾಗರ ಪ್ರಸಾದ್, ಹಾರ್ದಿಕ್ ಸಿಂಗ್, ಜಸ್ಕರಣ್ ಸಿಂಗ್, ಶಂಶೇರ್ ಸಿಂಗ್ ನೀಲಕಂಠ ಶರ್ಮಾ ತಂಡದಲ್ಲಿದ್ದಾರೆ. ‘ಅತ್ಯಂತ ಸಮತೋಲನದಿಂದ ಕೂಡಿದ ತಂಡವನ್ನು ಆಯ್ಕೆ ಮಾಡಿದ್ದೇವೆ. ಸುಖಜೀತ್ ಸಿಂಗ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ‘ ಎಂದು ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ. ತಂಡ: ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್ (ನಾಯಕ), ವಿವೇಕ್ ಸಾಗರ್ ಪ್ರಸಾದ್, ಹಾರ್ದಿಕ್ ಸಿಂಗ್, ಜಸ್ಕರಣ್ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ಅಕ್ಷದೀಪ್ ಸಿಂಗ್. ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್ (ಉಪನಾಯಕ), ಮನದೀಪ್ ಮೋರ್, ಸುರೇಂದರ್ ಕುಮಾರ್, ವರುಣಕುಮಾರ್, ಜರ್ಮನ್‌ಪ್ರೀತ್ ಸಿಂಗ್, ದಿಪ್ಸನ್ ಟಿರ್ಕಿ. ಫಾರ್ವರ್ಡ್ಸ್: ಮನದೀಪ್ ಸಿಂಗ್, ಲಲಿತಕುಮಾರ್ ಉಪಾಧ್ಯಾಯ, ಶಿಲಾನಂದ ಲಾಕ್ರ, ಸುಖಜೀತ್ ಸಿಂಗ್, ಅಭಿಷೇಕ್. ಮೀಸಲು: ಕೃಷನ್ ಬಹಾದ್ದೂರ್ ಪಾಠಕ್, ಅಮಿತ್ ರೋಹಿದಾಸ್, ರಾಜಕುಮಾರ್ ಪಾಲ್, ಮೊಯರಂಗ್ತೆಮ್ ರವಿಚಂದ್ರ ಸಿಂಗ್, ದಿಲ್‌ಪ್ರೀತ್ ಸಿಂಗ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.