ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ ನವದೆಹಲಿ: ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರ ಆಟದ ಬಗ್ಗೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್‌. ಪ್ರಜ್ಞಾನಂದ ಸಾಧನೆ ಕುರಿತು ಟ್ವೀಟ್ ಮಾಡಿರುವ ಸಚಿನ್, ‘ಪ್ರಜ್ಞಾನಂದ ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರಿಗೆ ಚೆಸ್ ವೃತ್ತಿಜೀವನದಲ್ಲಿಮತ್ತಷ್ಟುಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. ‘ಪ್ರಜ್ಞಾನಂದಗೆ ಎಂತಹ ಅದ್ಭುತವಾದ ಭಾವನೆ ಮೂಡಿರಬೇಕು. 16 ವರ್ಷ, ಅದೂ ಕಪ್ಪು ಕಾಯಿಗಳೊಂದಿಗೆ ಆಡುತ್ತಾ, ಅನುಭವಿ ಮತ್ತು ನಿಪುಣ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದ್ದುಮೋಡಿ ಮಾಡಿದೆ!ನಿಮ್ಮ ಸುದೀರ್ಘ ಮತ್ತು ಯಶಸ್ವಿ ಚೆಸ್ ವೃತ್ತಿಜೀವನಕ್ಕೆ ಶುಭಾಶಯಗಳು. ನೀವು ಭಾರತವೇ ಹೆಮ್ಮೆಪಡುವಂತೆ ಮಾಡಿದ್ದೀರಿ!’ ಎಂದು ಬರೆದುಕೊಂಡಿದ್ದಾರೆ. . 16, & , , ! & . ’ ! ../ ಓದಿ... ಚೆಸ್: 16 ವರ್ಷದ ಗ್ರ್ಯಾಂಡ್‌ಮಾಸ್ಟರ್‌ಗೆ ಮಣಿದ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಸೋಮವಾರ ನಡೆದ ಟೂರ್ನಿಯ ಎಂಟನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಪ್ರಜ್ಞಾನಂದ ಆಘಾತ ನೀಡಿದ್ದರು. ಕಪ್ಪುಕಾಯಿಗಳೊಂದಿಗೆ ಆಡಿದ 16 ವರ್ಷದ ಪ್ರಜ್ಞಾನಂದ 39 ನಡೆಗಳಲ್ಲಿ ನಾರ್ವೆ ಆಟಗಾರನಿಗೆ ಸೋಲುಣಿಸಿದ್ದರು. ಇದರೊಂದಿಗೆ ಸತತ ಮೂರು ಗೇಮ್‌ ಗೆದ್ದು ಮುನ್ನಡೆದಿದ್ದ ಕಾರ್ಲ್‌ಸನ್ ಓಟಕ್ಕೆ ತಡೆಯೊಡ್ಡಿದ್ದರು. ಎಂಟು ಸುತ್ತುಗಳ ಬಳಿಕ ಎಂಟು ಪಾಯಿಂಟ್ಸ್ ಗಳಿಸಿರುವ ಪ್ರಜ್ಞಾನಂದ, ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿಜಂಟಿ 12ನೇ ಸ್ಥಾನದಲ್ಲಿದ್ದಾರೆ. ಕಾರ್ಲಸನ್ ಎದುರಿನ ಗೇಮ್‌ಗೂ ಮೊದಲು ಅವರು ಆರ್ಮೇನಿಯಾದ ಲೆವ್ ಅರೋನಿಯನ್‌ ಅವರನ್ನು ಮಣಿಸಿದ್ದರು. ಎರಡು ಡ್ರಾ ಮತ್ತು ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದ್ದರು. ಪ್ರಜ್ಞಾನಂದ ಅವರು ನೆದರ್ಲೆಂಡ್ಸ್‌ನ ಅನೀಶ್ ಗಿರಿ ಮತ್ತು ವಿಯೆಟ್ನಾಂನ ಕ್ವಾಂಗ್‌ ಲಿಯಮ್‌ ಲೆ ಅವರೊಂದಿಗೆ ಡ್ರಾ ಸಾಧಿಸಿದ್ದರೆ, ಎರಿಕ್ ಹ್ಯಾನ್ಸೆನ್‌, ಡಿಂಗ್ ಲಿರೆನ್‌, ಜಾನ್‌ ಕ್ರಿಸ್ಟಾಫ್‌ ದುಡಾ ಮತ್ತು ಶಕರಿಯಾರ್‌ ಮಮೆದ್ಯರೊವ್ ಎದುರು ನಿರಾಸೆ ಕಂಡಿದ್ದರು. ಕೆಲವು ದಿನಗಳ ಹಿಂದೆ ವಿಶ್ವಚಾಂಪಿಯನ್‌ಷಿಪ್ ಪಂದ್ಯದಲ್ಲಿ ಕಾರ್ಲ್‌ಸನ್‌ಗೆ ಸೋತಿದ್ದ ರಷ್ಯಾದ ಇಯಾನ್ ನೆಪೊಮ್ನಿಯಾಚಿ (19 ಪಾಯಿಂಟ್ಸ್) ಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದರೆ, ದಿಂಗ್ ಲಿರೆನ್‌ ಮತ್ತು ಹ್ಯಾನ್ಸೆನ್‌ (ತಲಾ 15 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.