ಪಿವಿಎಲ್: ಬ್ಲ್ಯಾಕ್‌ಹಾಕ್ಸ್‌ ಜಯಭೇರಿ ಹೈದರಾಬಾದ್: ಹೈದರಾಬಾದ್ ಬ್ಲ್ಯಾಕ್ ಹಾಕ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೈಮ್ ವಾಲಿಬಾಲ್ ಲೀಗ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬ್ಲ್ಯಾಕ್‌ ಹಾಕ್ಸ್‌ ತಂಡವು 15–14, 15–11, 15–14, 15–7, 15–13 ರಿಂದ ಚೆನ್ನೈ ಬ್ಲಿಟ್ಜ್‌ ತಂಡದ ಎದುರು ಜಯಿಸಿತು. ಹೈದರಾಬಾದ್ ತಂಡದಲ್ಲಿ ಅಮೋಘವಾಗಿ ಆಡಿದ ಎಸ್‌.ವಿ. ಗುರುಪ್ರಶಾಂತ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಚೆನ್ನೈ ತಂಡಕ್ಕೆ ನವೀನ್ ರಾಜಾ ಜೇಕಬ್ ಮತ್ತು ಬ್ರುನೊ ಡಿಸಿಲ್ವಾ ಅವರು ಉತ್ತಮ ಆರಂಭ ನೀಡಿದ್ದರು. 6–2ರ ಮುನ್ನಡೆ ಗಳಿಸಿತ್ತು. ಆದರೆ ಗುರು ಪ್ರಶಾಂತ್ ಅವರ ಚುರುಕಿನ ಆಟದಿಂದಾಗಿ ಹೈದರಾಬಾದ್ ಮುನ್ನಡೆ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.