ಬಾಲ್‌ ಬ್ಯಾಡ್ಮಿಂಟನ್‌: ಜಯಾ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಶಸ್ತಿ ಬೆಂಗಳೂರು: ಉತ್ತಮ ಆಟವಾಡಿದ ಜಯಾ ಸ್ಪೋರ್ಟ್ಸ್ ಕ್ಲಬ್ ತಂಡದವರು ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಸಹ್ಯಾದ್ರಿ ಸ್ಪೋರ್ಟ್ಸ್ ಕ್ಲಬ್‌ನವರು ಕತ್ರಿಗುಪ್ಪೆಯ ರಾಮರಾವ್‌ ಬಡಾವಣೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಜಯಾ ಸ್ಪೋರ್ಟ್ಸ್ 36–34, 36–18ರಿಂದ ಕಾಮಧೇನು ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.