ಬೆಂಗಳೂರಿನಲ್ಲಿ ಜೂನಿಯರ್ ಹಾಕಿ ಶಿಬಿರ ಬೆಂಗಳೂರು: ‌ಜೂನಿಯರ್ ಪುರುಷ ಹಾಕಿಪಟುಗಳ ರಾಷ್ಟ್ರೀಯ ಶಿಬಿರ ನಗರದಲ್ಲಿ ಇದೇ 14ರಿಂದ 25ರ ವರೆಗೆ ನಡೆಯಲಿದ್ದು ಇದಕ್ಕಾಗಿ 65 ಮಂದಿಯ ಹೆಸರನ್ನು ಹಾಕಿ ಇಂಡಿಯಾ ಶನಿವಾರ ಘೋಷಿಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಶಿಬಿರ ನಡೆಯಲಿದ್ದು ಭುವನೇಶ್ವರದಲ್ಲಿ ಕಳೆದ ಬಾರಿ ನಡೆದ ಎಪ್‌ಐಎಚ್ ಜೂನಿಯರ್ ವಿಶ್ವಕಪ್‌ ಟೂರ್ನಿಯಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಆಟಗಾರರ ಆಯ್ಕೆ ನಡೆದಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಶಿಬಿರದಿಂದ ಒಟ್ಟು 33 ಆಟಗಾರರನ್ನು ಆಯ್ಕೆ ಮಾಡಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ನಂತರ ಮುಂದಿನ ಟೂರ್ನಿಗಳಿಗೆ ತಂಡವನ್ನು ಆರಿಸಲಾಗುವುದು. ’ಹೊಸ ಆಟಗಾರರ ಪ್ರತಿಭೆ ಅಳೆಯಲು ಮತ್ತು ಅವರು ಮುಂದಿನ ಹಂತದ ವರೆಗೆ ಬೆಳೆಯಲು ಈ ಶಿಬಿರ ಉಪಯುಕ್ತವಾಗಲಿದೆ. ಮುಂಬರುವ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸುವುದು ಮತ್ತು ಉತ್ತಮ ಆಟಗಾರರನ್ನು ಕಣಕ್ಕೆ ಇಳಿಸುವುದು ಶಿಬಿರದ ಪ್ರಮುಖ ಉದ್ದೇಶ‘ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್ ತಿಳಿಸಿದರು. ಶಿಬಿರಕ್ಕೆ ಆಯ್ಕೆಯಾದವರು: ಗೋಲ್‌ಕೀಪರ್‌ಗಳು: ಅಮೃತ್‌ಪಾಲ್ ಸಿಂಗ್, ಬಿಕ್ರಂಜಿತ್ ಸಿಂಗ್, ದೀಪಕ್‌, ಹಿಮವಾನ್ ಸಿಹಾಗ್‌, ಮೋಹಿತ್ ಎಚ್‌.ಎಸ್‌, ಸಾಹಿಲ್‌, ಪ್ರತೀಕ್ ನಿಗಮ್‌, ಅಂಕಿತ್ ಮಲಿಕ್‌; ಡಿಫೆಂಡರ್‌ಗಳು: ಶ್ರದ್ಧಾನಂದ ತಿವಾರಿ, ನೀರಜ್ ಕುಮಾರ್ ಸಿಂಗ್‌, ಆಕಾಶ್‌ದೀಪ್ ಸಿಂಗ್‌, ಸುನಿಲ್ ಜೋಜೊ, ಸಿರಿಲ್ ಲುಗುನ್‌, ಆಲ್ಬರ್ಟ್‌ ಡುಂಗ್‌ಡುಂಗ್‌, ಅಮನ್‌ದೀಪ್ ಲಾಕ್ರಾ, ಅರವಿಂದ್‌, ಅತೀಶ್‌ ದೊದ್ರಾಯ್‌, ಗುಜೋತ್ ಸಿಂಗ್, ಕವಿಯರಸನ್ ಆರ್‌, ನವಜೋತ್‌ ಸಿಂಗ್‌, ಪ್ರೀತಮ್ ಟೊಪ್ಪೊ, ರವನೀತ್ ಸಿಂಗ್‌, ರೋಹಿತ್‌, ಸಚಿನ್‌ ಡುಂಗ್‌ಡುಂಗ್‌; ‌ಮಿಡ್‌ಫೀಲ್ಡರ್ಸ್‌: ವಿಷ್ಣುಕಾಂತ್‌ ಸಿಂಗ್‌, ಅಂಕಿತ್ ಪಾಲ್‌, ಅಬ್ದುಲ್‌ ಅಹದ್‌, ಆಕಾಶ್‌, ಅಂಕುಶ್‌, ಆಶಿಮ್‌ ಟರ್ಕಿ, ಡೆನಿಸ್ ಕೆರ್ಕೆಟಾ, ದಿಪೀಪನ್‌, ಜಸ್ವಿಂದರ್ ಸಿಂಗ್‌, ಪಂಕಜ್‌, ಪ್ರದೀಪ್‌ ಸಿಂಗ್‌, ಪ್ರಸೇನ್‌ಜಿತ್ ದೇವ್‌, ರಾಜ್‌ಬೀರ್ ಸಿಂಗ್‌, ರಾಜಿಂದರ್ ಸಿಂಗ್‌, ಟರ್ಟಾನ್ ಮಿನೆಜ್‌, ಸಮೀರ್‌ ಸುರೀನ್‌, ಜಾನ್ಸನ್ ಪುರ್ತಿ, ಅಮೀರ್ ಅಲಿ, ಸೌರಭ್ ಆನಂದ್‌ ಖುಶ್ವಾ, ಫಾರ್ವರ್ಡರ್‌ಗಳು: ಉತ್ತಮ್ ಸಿಂಗ್‌, ಅರೈಜೀತ್ ಸಿಂಗ್ ಹುಂಡಾಲ್‌, ಸುದೀಪ್‌ ಚಿರ್ಮಾಕೊ, ಅಮನ್‌ದೀಪ್‌, ಬಾಬಿ ಸಿಂಗ್‌ ಧಾಮಿ, ಆದಿತ್ಯ ಲಾಲಾಗೆ, ಅಗಂದ್‌ಬೀರ್ ಸಿಂಗ್‌, ಅರುಣ್ ಸಹಾನಿ, ಭವಿನ್ ಕುಶಾಲಪ್ಪ ಕೆ.ಆರ್‌, ಬಿರ್ಸಾ ಒರೆಯಾ, ಚಿರನ್ ಮೇದಪ್ಪ, ದೀಪಕ್‌, ಹಿಮಾಂಶು ಸಾನಿಕ್‌, ಲೆಕ್ಕಲ ಹಿತೇಶ್ ರಾವ್, ಮೋಹಿತ್ ಕರ್ಮಾ, ಪೂವಣ್ಣ ಸಿ.ಬಿ, ಆರ್‌.ನಿಶಿ ದೇವ ಅರುಳ್‌, ಆಕ್ಷಯ್ ಅವಧ್‌, ಸತೀಸ್‌ ಬಿ, ತಲೇಬ್‌ ಶಾ, ಪ್ರತಾಪ್‌ ಕಿಶನ್‌ರಾವ್‌ ಶಿಂಧೆ, ಅಭಿಷೇಕ್ ಪ್ರತಾಪ್‌ ಸಿಂಗ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.