ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿ: ಅರುಂಧತಿ, ಪರ್ವೀನ್‌ಗೆ ನಿರಾಸೆ ನವದೆಹಲಿ: ಯೂತ್ ವಿಶ್ವ ಚಾಂಪಿಯನ್, ಭಾರತದ ಅರುಂಧತಿ ಚೌಧರಿ ಮತ್ತು ಪರ್ವೀನ್ ಅವರು ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗಳಲ್ಲಿ ಸೋಲನುಭವಿಸಿದರು. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಹಿಳೆಯರ 70 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅರುಂಧತಿ ಗುರುವಾರ 1–4ರಿಂದ ಒಲಿಂಪಿಕ್ ಚಾಂಪಿಯನ್, ಟರ್ಕಿಯ ಬುಸೆನಾಜ್‌ ಸುರ್ಮೇನೆಲಿ ಎದುರು ಎಡವಿದರು. ಪರ್ವೀನ್‌ (63 ಕೆಜಿ) 2–3ರಿಂದ ರಷ್ಯಾದ ನತಾಲಿಯ ಸಿಚುಗೊವಾ ಅವರಿಗೆ ಮಣಿದರು. ಗುರುವಾರ ಜೂನಿಯರ್ ವಿಶ್ವ ಚಾಂಪಿಯನ್‌ ನಿಖತ್ ಜರೀನ್‌ (52 ಕೆಜಿ) ಮತ್ತು ನೀತು (48 ಕೆಜಿ) ಸೆಮಿಫೈನಲ್‌ ತಲುಪುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.