ವಿಟಿಯು ಕ್ರಾಸ್‌ಕಂಟ್ರಿ: ಎನ್‌ಎಂಎಎಂಐಟಿ, ಎಸ್‌ಡಿಎಂಸಿಇಟಿಗೆ ಪ್ರಶಸ್ತಿ ಬೆಂಗಳೂರು:ಮಂಗಳೂರಿನ ಎನ್‌ಎಂಎಎಂಐಟಿ ಮತ್ತು ಧಾರವಾಡದ ಎಸ್‌ಡಿಎಂಸಿಇಟಿ ತಂಡಗಳು ಇಲ್ಲಿಯ ವಿವೇಕಾನಂದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ಇಕ ವಿಶ್ವವಿದ್ಯಾಲಯದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು. ಫಲಿತಾಂಶಗಳು ತಂಡ ಪ್ರಶಸ್ತಿ: ಪುರುಷರು: ಎನ್‌ಎಂಎಎಂಐಟಿ ಮಂಗಳೂರು (24 ಅಂಕಗಳು)–1, ಎಸ್‌ಐಟಿ ಮಂಗಳೂರು (40 ಅಂಕಗಳು)–2, ಎಐಸಿಇಟಿ, ಮಂಗಳೂರು (81 ಅಂಕಗಳು) –3. ಮಹಿಳೆಯರು: ಎಸ್‌ಡಿಎಂಸಿಇಟಿ ಧಾರವಾಡ (33 ಅಂಕ)–1, ಎನ್‌ಐಎಂಎಎಂಐಟಿ, ಮಂಗಳೂರು (55 ಅಂಕ) –2, ಎಂವಿಜೆ ಎಂಜಿನಿಯರಿಂಗ್ ಕಾಲೇಜು (72 ಅಂಕ)–3. ಪುರುಷರು:ಸಿ. ರಂಗನಾಥ (ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ರಾಮನಗರ)–1, ಸಂಜಯ್ ಕುಮಾರ್ (ಎಸ್‌ಐಟಿಐಎಂ ಮಂಗಳೂರು)–2, ರಾಜೇಂದ್ರ (ಎನ್‌ಎಂಎಎಂಐಟಿ ಮಂಗಳೂರು)–3, ಕಾಲ: 35.57ನಿಮಿಷಗಳು. ಮಹಿಳೆಯರು: ಶ್ರೀನಿಧಿ ಸುರಗೊಂಡ (ಎಸ್‌ಡಿಎಂಸಿಇ, ಧಾರವಾಡ)–1, ಎನ್. ಗೀತಾ (ವಿಟಿಯು ಬೆಳಗಾವಿ)–2, ಸೀಮಾ ತೆಂಡೂಲ್ಕರ್ (ಆರ್‌ವಿಸಿಇ, ಬೆಂಗಳೂರು)–3. ಕಾಲ: 46.33 ನಿಮಿಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.