ಕೊಹಿಮಾ: ಮಾರ್ಚ್ 26ರಂದು ಸ್ಯಾಫ್‌, ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್ ಕೊಹಿಮಾ: ದಕ್ಷಿಣ ಏಷ್ಯಾ ಅಥ್ಲೆಟಿಕ್ ಫೆಡರೇಷನ್‌ (ಸ್ಯಾಫ್‌) ಮತ್ತು ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಮಾರ್ಚ್‌ 26ರಂದು ಇಲ್ಲಿ ನಡೆಯಲಿವೆ. ನಾಗಾಲ್ಯಾಂಡ್‌ ಅಥ್ಲೆಟಿಕ್‌ ಸಂಸ್ಥೆ (ಎನ್‌ಎಎ) ಈ ವಿಷಯ ತಿಳಿಸಿದೆ. ‘ಮೊದಲು ಈ ಚಾಂಪಿಯನ್‌ಷಿಪ್ ಜನವರಿ 15ರಂದು ನಿಗದಿಯಾಗಿತ್ತು. ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಹರಡುವ ಆತಂಕದಿಂದಾಗಿ ಮುಂದೂಡಲಾಗಿತ್ತು. ನಾಗಾಲ್ಯಾಂಡ್ ಸರ್ಕಾರದೊಂದಿಗೆ ಸ್ಯಾಫ್‌ ಹಾಗೂ ಭಾರತ ಅಥ್ಲೆಟಿಕ್ ಫೆಡರೇಷನ್‌ ಚರ್ಚೆ ನಡೆಸಿದ ಬಳಿಕ ಮಾರ್ಚ್ 26ಕ್ಕೆ ಚಾಂಪಿಯನ್‌ಷಿಪ್‌ಅನ್ನು ನಡೆಸಲು ಉದ್ದೇಶಿಸಲಾಗಿದೆ‘ ಎಂದುಎನ್‌ಎಎ ಅಧ್ಯಕ್ಷ ಅಬು ಮೇತಾ ತಿಳಿಸಿದ್ದಾರೆ. ಇದು ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.