ಅಥ್ಲೆಟಿಕ್ಸ್‌: ಉಷಾ ಕ್ರೀಡಾಶಾಲೆಯಲ್ಲಿ ಆಯ್ಕೆ ಟ್ರಯಲ್ಸ್ ಬೆಂಗಳೂರು: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬಾಲುಶ್ಶೇರಿಯಲ್ಲಿರುವ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನಲ್ಲಿ ಕ್ರೀಡಾಪಟುಗಳ ಆಯ್ಕೆ ಟ್ರಯಲ್ಸ್ ಏಪ್ರಿಲ್ 10ರಂದು ನಡೆಯಲಿದೆ. ದೇಶದ ಯಾವುದೇ ಭಾಗದ ಮಹಿಳಾ ಟ್ರ್ಯಾಕ್ ಮತ್ತು ಫೀಲ್ಡ್‌ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಲಿಂಪಿಯನ್ ಪಿ.ಟಿ.ಉಷಾ ಅವರು ನಡೆಸುತ್ತಿರುವ ಕ್ರೀಡಾಶಾಲೆಯಲ್ಲಿ ತರಬೇತಿಗಾಗಿ 14ರಿಂದ 18 ವರ್ಷ ವಯಸ್ಸಿನವರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ. ಆಸಕ್ತರು ವೈಯಕ್ತಿಕ ಮಾಹಿತಿ, ಜನನ ಪ್ರಮಾಣಪತ್ರದ ಮೂಲಪ್ರತಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಕ್ರೀಡಾ ಕಿಟ್ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಮಾಣಪತ್ರದೊಂದಿಗೆ ಏಪ್ರಿಲ್ 10ರ ಬೆಳಿಗ್ಗೆ 8 ಗಂಟೆಯ ಒಳಗೆ ಶಾಲೆಯ ಆವರಣದಲ್ಲಿ ಹಾಜರಿರಬೇಕು ಎಂದು ತಿಳಿಸಲಾಗಿದೆ. ಮಾಹಿತಿಗೆ 0496–2645811 ಅಥವಾ 9539007640 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.