ಹಾಕಿ: ಆಯ್ಕೆ ಟ್ರಯಲ್ಸ್ 12ರಂದು ಬೆಂಗಳೂರು: ರಾಜ್ಯ ಜೂನಿಯರ್ ಬಾಲಕರ ಹಾಕಿ ತಂಡದ ಆಯ್ಕೆ ಟ್ರಯಲ್ಸ್‌ ಇದೇ 12ರಂದು ನಡೆಯಲಿದೆ. ಜೂನ್ 12 ರಿಂದ 22ರವರೆಗೆ ಒಡಿಶಾದ ರೂರ್ಕೆಲಾದಲ್ಲಿ ನಡೆಯಲಿರುವ 13ನೇ ರಾಷ್ಟ್ರೀಯ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡವು ಸ್ಪರ್ಧಿಸಲಿದೆ. 2004ರ ಜನವರಿ 1ರಂದು ಅಥವಾ ನಂತರ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಬೇಕು. ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ನಡೆಯಲಿದೆ ಮೇ 12ರಂದು ಬೆಳಿಗ್ಗೆ 10 ಗಂಟೆಗೆ ಹಾಕಿ ಆಟಗಾರರು ಹಾಜರಿರಬೇಕು ಎಂದು ಹಾಕಿ ಕರ್ನಾಟಕದ ಮಹಾಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.