ಎಫ್‌ಐಎಚ್‌ ಪ್ರೊ ಲೀಗ್ ಹಾಕಿ: ಭಾರತಕ್ಕೆ ರೋಚಕ ಜಯ ಭುವನೇಶ್ವರ್: ಕೊನೆಯ ನಿಮಿಷದಲ್ಲಿ ಮನದೀಪ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡವು ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಅರ್ಜೆಂಟಿನಾ ಎದುರು ರೋಚಕ ಜಯ ಸಾಧಿಸಿತು. ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 4–3 ರಿಂದ ಅರ್ಜೆಂಟಿನಾವನ್ನು ಮಣಿಸಿತು. ಪಂದ್ಯದ 17ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಮೊದಲ ಗೋಲು ದಾಖಲಿಸಿದರು. ಜುಗರಾಜ್ ಸಿಂಗ್ 20 ಮತ್ತು 52ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳನ್ನಾಗಿ ಪರಿವರ್ತಿಸಿದರು. ಅರ್ಜೆಂಟಿನಾದ ಡೆಲ್ಲಾ ಟೊರ್ ನಿಕೊಲಸ್ (40ನೆ ನಿ), ಡಾಮಿನ್ ಥಾಮಸ್ (51ನೆ ನಿ) ಮತ್ತು ಫೆರೀರೊ ಮಾರ್ಟಿನ್ (56ನೇ ನಿ) ಗೋಲು ಗಳಿಸಿದರು. ಇದರಿಂದಾಗಿ ಸಮಬಲವಾಯಿತು. ನಂತರದ ಆಟ ಕುತೂಹಲ ಮೂಡಿಸಿತು. ಪಂದ್ಯದಲ್ಲಿ ಇನ್ನೂ 26 ಸೆಕೆಂಡುಗಳು ಮಾತ್ರ ಬಾಕಿಯಿದ್ದಾಗ ಮನದೀಪ್ ಸಿಂಗ್ ಕೈಚಳದಿಂದಾಗಿ ಗೋಲು ದಾಖಲಾಯಿತು. ಭಾರತ ಜಯಭೇರಿ ಬಾರಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.