ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಗೆ ಸಚಿನ್ ಸಿವಾಚ್‌ ತಾಷ್ಕೆಂಟ್‌, ಉಜ್ಬೆಕಿಸ್ತಾನ : ಇದೇ ಮೊದಲ ಬಾರಿ ಸ್ಪರ್ಧಿಸಿರುವ ಭಾರತದ ಬಾಕ್ಸರ್ ಸಚಿನ್‌ ಸಿವಾಚ್ ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ. ಸೋಮವಾರ ನಡೆದ 54 ಕೆಜಿ ವಿಭಾದ 32ರ ಘಟ್ಟದ ಹಣಾಹಣಿಯಲ್ಲಿ ಸಚಿನ್‌ 5–0ಯಿಂದ ಮೊಲ್ಡೊವಾದ ಸೆರ್ಜೆ ನೋವಾಕ್ ಅವರನ್ನು ಮಣಿಸಿದರು. ನೀಳಕಾಯದ ಲಾಭ ಪಡೆದ ಮಾಜಿ ಯೂತ್‌ ವಿಶ್ವ ಚಾಂಪಿಯನ್‌ ಸಚಿನ್‌ ಬೌಟ್‌ನುದ್ದಕ್ಕೂ ಎದುರಾಳಿಯನ್ನು ಕಂಗೆಡಿಸಿದರು. ತಾಂತ್ರಿಕ ನಿಪುಣತೆ ಮೆರೆದ ಭಾರತದ ಬಾಕ್ಸರ್‌, ಉತ್ತಮ ಡಿಫೆನ್ಸ್‌ನಿಂದಲೂ ಗಮನಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.