ಏರೋಬಿಕ್ ಜಿಮ್ನಾಸ್ಟಿಕ್ಸ್ ಇಂದಿನಿಂದ ಬೆಂಗಳೂರು: 16ನೇ ರಾಷ್ಟ್ರೀಯ ಏರೋಬಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಷಿಪ್‌ಗೆ ಉದ್ಯಾನಗರಿ ಆತಿಥ್ಯ ವಹಿಸಲಿದೆ. ಇದೇ 26 ಮತ್ತು 27ರಂದು ಚಾಂಪಿಯನ್‌ಷಿಪ್ ನಡೆಯಲಿದೆ. ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಿಮ್ನಾಸ್ಟಿಕ್ಸ್ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್‌ ಈ ಕುರಿತು ಮಾಹಿತಿ ನೀಡಿದರು. ಹೂಡಿಯ ಗೋಪಾಲನ್‌ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ., ಏಷ್ಯನ್ ಮತ್ತು ವಿಶ್ವ ಏರೋಬಿಕ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್ ಕೂಡ ನಡೆಯಲಿದೆ. ಭಾರತ ಫುಟ್‌ಬಾಲ್ ತಂಡದ ಆಟಗಾರ ಇಶಾನ್ ಪಂಡಿತ ಚಾಂಪಿಯನ್‌ಷಿಪ್‌ಗೆ ಮುಖ್ಯ ಅತಿಥಿಯಾಗಿ ಚಾಲನೆ ನೀಡಲಿದ್ದಾರೆ. ‘18 ರಾಜ್ಯಗಳಿಂದ ಸುಮಾರು 600 ಜಿಮ್ನಾಸ್ಟ್‌ಗಳು ಭಾಗವಹಿಸುವವರು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ‘ ಎಂದು ಪ್ರಭಾಕರ್ ಅವರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.