ಹಾಕಿ: ರಾಜ್ಯ ಜೂನಿಯರ್ ಮಹಿಳಾ ತಂಡಕ್ಕೆ ತೇಜಸ್ವಿನಿ ನಾಯಕಿ ಬೆಂಗಳೂರು: ಗೋಲ್‌ಕೀಪರ್‌ ತೇಜಸ್ವಿನಿ ಡಿ.ಎನ್ ಅವರು ಕರ್ನಾಟಕ ರಾಜ್ಯ ಜೂನಿಯರ್ ಮಹಿಳೆಯರ ಹಾಕಿ ತಂಡದ ನಾಯಕಿಯಾಗಿ ನೇಮಕವಾಗಿದ್ದಾರೆ. ಶುಕ್ರವಾರದಿಂದ ಏಪ್ರಿಲ್ 3ರ ವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಹಾಕಿ ಇಂಡಿಯಾ ಮಹಿಳೆಯರ ಜೂನಿಯರ್ ರಾಷ್ಟ್ರೀಯ ಟೂರ್ನಿ ನಡೆಯಲಿದೆ. ಕರ್ನಾಟಕ ತಂಡ ‘ಎಚ್‌’ ಗುಂಪಿನಲ್ಲಿ ಸ್ಥಾನ ಗಳಿಸಿದ್ದು ಆಂಧ್ರಪ್ರದೇಶ, ಹಾಕಿ ಬೆಂಗಾಲ್ ಮತ್ತು ಹಾಕಿ ಗುಜರಾತ್ ತಂಡಗಳು ಇದೇ ಗುಂಪಿನಲ್ಲಿ ಇವೆ. ತಂಡ:ತೇಜಸ್ವಿನಿ (ಗೋಲ್‌ಕೀಪರ್‌, ನಾಯಕಿ), ಜೀವಿತಾ ಬಿ.ಜಿ, ಮಣಿ ಎಚ್‌, ದಿಲಾನ್‌ ಕೆ.ಜೆ, ಸಚಿತಾ ಟಿ.ಸಿ (ಗೋಲ್‌ಕೀಪರ್), ಕೀರ್ತನಾ ಬಿ.ಎಂ, ನಿಸರ್ಗ ಎಸ್‌.ಬಿ, ಕಾವೇರಿ ಲೆಂಕಣ್ಣವರ, ಸಹನಾ ಸಿ.ಎಂ, ಜಾಹ್ನವಿ ಎಚ್‌.ಎಸ್‌, ಸಿದ್ದಗಂಗಾ ಎಚ್‌.ಡಿ, ತಾಜ್ ಬೆಳ್ಳಿಯಪ್ಪ ಕೆ, ದೇಚಮ್ಮ ಗಣಪತಿ, ಸೀಮಾ ಆನಂದ್‌ ರಾವ್ ಪವಾರ್, ಅಪ್ಸರ ಎಚ್‌.ಎ, ವುದುಮುಲ ಸೌಮ್ಯಾ, ಖುಷಿ ಎಂ. ಜೈನ್‌, ದೀಪಿಕಾ ಬಿ; ಕೋಚ್‌: ಕೋಮಲಾ ಬಿ.ಎಂ; ಮ್ಯಾನೇಜರ್: ಧರ್ಮೇಂದ್ರ ಜಿ.ಆರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.