ನೆಟ್‌ಬಾಲ್‌: ಯಶಸ್‌, ಗಗನಾಗೆ ರಾಜ್ಯ ತಂಡಗಳ ನಾಯಕತ್ವ ಬೆಂಗಳೂರು: ಯಶಸ್ ಗೌಡ ಎಂ.ಎನ್ ಮತ್ತು ಗಗನಾ ಕೆ.ಎಸ್ ಅವರು ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳನ್ನು ಮುನ್ನಡೆಸಲಿದ್ದಾರೆ. ಇದೇ 26ರಿಂದ 29ರ ವರೆಗೆ ಹರಿಯಾಣದ ಭಿವಾನಿಯಲ್ಲಿ ಟೂರ್ನಿ ನಡೆಯಲಿದ್ದು ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್ ತಂಡಗಳನ್ನು ಗುರುವಾರ ಪ್ರಕಟಿಸಿದ್ದಾರೆ. ಬಾಲಕಿಯರ ತಂಡಕ್ಕೆ ಬಿಎಂಎಸ್‌ ಕಾಲೇಜಿನಲ್ಲೂ ಬಾಲಕರ ತಂಡಕ್ಕೆ ಮೈಸೂರಿನ ಗುಡ್ ಶೆಫರ್ಡ್ ಶಾಲೆಯಲ್ಲೂ ತರಬೇತಿ ಮತ್ತು ಆಯ್ಕೆ ಶಿಬಿರ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ತಂಡಗಳು: ಬಾಲಕರು: ಯಶಸ್ ಗೌಡ ಎಂ.ಎನ್ (ನಾಯಕ), ಸುದೀಪ್ ನಾಯಕ ಜೆ.ಸಿ (ಉಪನಾಯಕ), ಬಿಪಿನ್ ಕೆ, ದಿನೇಶ್ ಡಿ.ವಿ, ದರ್ಶನ್ ಆರ್‌, ದಿನೇಶ ಎಂ, ಅಭಿ ಎಸ್‌, ಅಶ್ವತ್ಥ್‌ ನಾಯಕ ಎಂ, ಮೊಹಮ್ಮದ್ ಅಫಾನ್, ಪ್ರಜ್ವಲ್ ಎಂ.ಎಸ್‌, ರಮೇಶ ನಾಯಕ ಜೆ.ಸಿ, ಹರ್ಷವರ್ಧನ; ಕೋಚ್‌: ಶಿವಮೂರ್ತಿ ಜಿ.ಕೆ. ಬಾಲಕಿಯರು: ಗಗನಾ ಕೆ.ಸ್‌ (ನಾಯಕಿ), ಶ್ರುತಿ ಬಿ.ಜಿ (ಉಪನಾಯಕಿ), ಸ್ವಾತಿ ಜಿ, ಸೊನಾಲಿ ಎಲ್‌, ಮಹೇಶ್ವರಿ ಎಸ್‌, ಮೋನಿಷಾ ಮಂಜುನಾಥ್‌, ಅಲಿಯಾ ಅಯೂಬ್‌ ಸೇಠ್‌, ಶರಣ್ಯ ಡಿ, ಶರ್ಣ್ಯ ಕೆ, ಭೂಮಿಕಾ ಎಚ್‌, ಸ್ನೇಹ ಕೆ, ಲಾವಣ್ಯ ಜಿ; ಕೋಚ್‌: ಶಿಪಾಲಿ ಎಂ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.