ಕುಸ್ತಿ: ಭಾರತ ತಂಡದಲ್ಲಿ ಅನ್ಷು, ಸರಿತಾಗೆ ಸ್ಥಾನ ನವದೆಹಲಿ: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತರಾಗಿರುವ ಅನ್ಷು ಮಲಿಕ್ ಮತ್ತು ಕಂಚು ಪದಕ ಪಡೆದಿರುವ ಸರಿತಾ ಮೋರ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಏಪ್ರಿಲ್ 19ರಿಂದ 24ರವರೆಗೆ ಮಂಗೋಲಿಯಾದಲ್ಲಿ ಚಾಂಪಿಯನ್‌ಷಿಪ್ ನಡೆಯಲಿದೆ. ಅನ್ಷು 57 ಕೆ.ಜಿ ಮತ್ತು ಸರಿತಾ 59 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಇವರಿಬ್ಬರೂ ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದರು. ಆದರೆ, ಒಲಿಂಪಿಯನ್ ವಿನೇಶಾ ಪೋಗಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಮನೀಷಾ (50ಕೆಜಿ), ಸ್ವಾತಿ ಶಿಂಧೆ (53ಕೆಜಿ), ಸುಷ್ಮಾ ಶೋಕೀನ್ (55ಕೆಜಿ), ರಾಧಿಕಾ (65ಕೆಜಿ), ಸೋನಿಕಾ ಹೂಡಾ (68ಕೆಜಿ), ನಿಕ್ಕಿ (72ಕೆಜಿ) ಮತ್ತು ಸುದೇಶಾ (76 ಕೆಜಿ) ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.