ರ‍್ಯಾಲಿ: ಕರ್ಣ–ನಿಖಿಲ್ ಜೋಡಿ ಮುನ್ನಡೆ ಚೆನ್ನೈ: ಪ್ರತಿಕೂಲ ಪರಿಸ್ಥಿತಿಯಲ್ಲೂ ಎದೆಗುಂದದೆ ಮುನ್ನುಗ್ಗಿದ ಬೆಂಗಳೂರಿನ ಕರ್ಣ ಕಡೂರು ಮತ್ತು ಸಹ ಚಾಲಕ ನಿಖಿಲ್ ಪೈ ಅವರು ದಕ್ಷಿಣ ಭಾರತ ರ‍್ಯಾಲಿಯಲ್ಲಿ ಮುನ್ನಡೆ ಉಳಿಸಿಕೊಂಡರು. ಎಫ್‌ಐಎ ಏಷ್ಯಾ ಪೆಸಿಫಿಕ್ ರ‍್ಯಾಲಿಯ ಭಾಗವಾಗಿ ನಡೆಯುತ್ತಿರುವ ಸ್ಪರ್ಧೆ, ಅಖಿಲ ಭಾರತ ರ‍್ಯಾಲಿ ಚಾಂಪಿಯನ್‌ಷಿಪ್‌ನ ಕೊನೆಯ ಘಟ್ಟವೂ ಆಗಿದೆ. ಪ‍್ರಶಸ್ತಿ ಗೆಲ್ಲುವ ನೆಚ್ಚಿನ ಚಾಲಕ ಹಾಗೂ ಏಳು ಬಾರಿಯ ಚಾಂಪಿಯನ್ ಗೌರವ್ ಗಿಲ್ ಶನಿವಾರದ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ಕರ್ಣ ಮತ್ತು ನಿಖಿಲ್ ಅವರ ವಾಹನದಲ್ಲಿ ಹಾದಿ ಮಧ್ಯೆ ತೊಂದರೆ ಕಾಣಿಸಿಕೊಂಡಿತ್ತು. ಆದರೂ ಧೈರ್ಯದಿಂದ ಮುನ್ನುಗ್ಗಿ ದಿನದ ಕೊನೆಯಲ್ಲಿ ಸಂಭ್ರಮದ ನಗೆ ಸೂಸಿದರು. ಕೇರಳದ ಕೊಲ್ಲಂನ ಯೂನುಸ್ ಇಲಿಯಾಸ್ ಮತ್ತು ಕೋಲ್ಕತ್ತದ ಅಮಿತ್‌ ರಜಿತ್ ಘೋಷ್‌ ಅವರಿಗಿಂತ 19 ಸೆಕೆಂಡುಗಳ ಮುನ್ನಡೆಯನ್ನು ಉಳಿಸಿಕೊಂಡು ಕರ್ಣ ಜೋಡಿ ಸಾಮರ್ಥ್ಯ ಮೆರೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.