ಸೌದಿ ಅರೆಬಿಯಾ ಎಫ್‌1 ನಿರಾತಂಕ ಜಿದ್ದಾ, ಸೌದಿ ಅರೆಬಿಯ: ತೈಲ ಕೋಠಿ ಮೇಲೆ ಯೆಮನ್‌ನ ಹೂತಿ ಬಂಡುಕೋರರು ಆಕ್ರಮಣ ನಡೆಸಿದರೂ ಇಲ್ಲಿ ಆಯೋಜಿಸಲುದ್ದೇಶಿಸಿರುವ ಎಫ್‌1 ರೇಸ್ ನಿರಾತಂಕವಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಎಫ್‌1 ಸರ್ಕೀಟ್‌ನ 11 ಕಿಲೊಮೀಟರ್ ದೂರದಲ್ಲಿ ಆಕ್ರಮಣ ನಡೆದಿತ್ತು. ಈ ಸಂದರ್ಭದಲ್ಲಿ ರೇಸ್‌ನ ಮೊದಲ ಅಭ್ಯಾಸ ನಡೆಯುತ್ತಿತ್ತು. ಕೆಲವು ತಾಸುಗಳ ನಂತರ 20ರಷ್ಟು ಚಾಲಕರು ಸಭೆ ಸೇರಿ ಮುಂದಿನ ಹಾದಿ ಬಗ್ಗೆ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರೇಸ್ ಮುಂದುವರಿಯುವ ಬಗ್ಗೆ ಸಂದೇಹವಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.