ಎಫ್‌ಐಎಚ್‌ ಪ್ರೊ ಲೀಗ್ ಹಾಕಿ: ಭಾರತ ತಂಡಕ್ಕೆ ಅಮಿತ್ ಸಾರಥ್ಯ; ನೀಲಮ್‌ಗೆ ಸ್ಥಾನ ಭುವನೇಶ್ವರ: ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯ ಇಂಗ್ಲೆಂಡ್ ಎದುರಿನ ಎರಡು ಪಂದ್ಯಗಳಿಗೆ ಭಾರತ ಹಾಕಿ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಅಮಿತ್ ರೋಹಿದಾಸ್‌ ಅವರಿಗೆ ಮತ್ತೆ ತಂಡದ ನಾಯಕತ್ವ ನೀಡಲಾಗಿದೆ. 22 ಆಟಗಾರರ ತಂಡದಲ್ಲಿ ನೀಲಂ ಸಂಜೀಪ್ ಕ್ಸೆಸ್‌ ಅವರಿಗೆ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳು ಏಪ್ರಿಲ್ 2 ಮತ್ತು ಮೂರರಂದು ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಢಾಕಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನೀಲಮ್ ಭಾರತದ ತಂಡದ ಭಾಗವಾಗಿದ್ದರು. ಟೂರ್ನಿಯಲ್ಲಿ ತಂಡವು ಮೂರನೇ ಸ್ಥಾನ ಗಳಿಸಿತ್ತು. ಅಮಿತ್ ನಾಯಕತ್ವದಲ್ಲಿ ತಂಡವು ಇತ್ತೀಚೆಗೆ ಅರ್ಜೆಂಟೀನಾ ಎದುರು ಪ್ರೊ ಲೀಗ್‌ನ ಎರಡು ಪಂದ್ಯಗಳಲ್ಲಿ ಕ್ರಮವಾಗಿ 2–2 (1–3 ಶೂಟೌಟ್‌) ಸೋಲು ಮತ್ತು 4–3ರಿಂದ ಜಯ ಸಾಧಿಸಿತ್ತು. ಭಾರತ (16 ಪಾಯಿಂಟ್ಸ್) ತಂಡವು ಪ್ರೊ ಲೀಗ್‌ನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದ್ದು, ಜರ್ಮನಿ (17) ಮೊದಲ ಸ್ಥಾನದಲ್ಲಿದೆ. ಭಾರತ ತಂಡ ಇಂತಿದೆ: ಗೋಲಕೀಪರ್ಸ್‌: ಕೃಷ್ಣ ಬಹದ್ದೂರ್ ಪಾಠಕ್, ಪಿ.ಆರ್.ಶ್ರೀಜೇಶ್‌. ಡಿಫೆಂಡರ್ಸ್: ಸುರೇಂದರ್ ಕುಮಾರ್‌,ಹರ್ಮನ್‌ಪ್ರೀತ್ ಸಿಂಗ್ (ಉಪ ನಾಯಕ),ನಿಲಂ ಸಂಜೀಪ್ ಕ್ಸೆಸ್‌,ವರುಣ್ ಕುಮಾರ್, ಅಮಿತ್ ರೋಹಿದಾಸ್ (ನಾಯಕ),ಜುಗರಾಜ್‌ ಸಿಂಗ್. ಮಿಡ್‌ಫೀಲ್ಡರ್ಸ್:ಜಸ್ಕರನ್ ಸಿಂಗ್,ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್‌,ಹಾರ್ದಿಕ್ ಸಿಂಗ್,ನೀಲಕಂಠ ಶರ್ಮ, ಶಂಷೇರ್‌ ಸಿಂಗ್,ರಾಜ್ ಕುಮಾರ್ ಪಾಲ್,ಸುಮಿತ್,ವಿವೇಕ್ ಸಾಗರ್ ಪ್ರಸಾದ್. ಫಾರ್ವರ್ಡ್ಸ್:ಗುರ್ಜಂತ್ ಸಿಂಗ್,ಮನದೀಪ್‌ ಸಿಂಗ್,ಸುಖಜೀತ್ ಸಿಂಗ್,ಅಭಿಷೇಕ್,ಗುರುಸಾಹಿಬ್‌ಜೀತ್‌ ಸಿಂಗ್,ಶೀಲಾನಂದ್ ಲಾಕ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.