ಬ್ಯಾಸ್ಕೆಟ್‌ಬಾಲ್‌: ರಾಮಯ್ಯ ಸಂಸ್ಥೆಗೆ ಪ್ರಶಸ್ತಿ ಬೆಂಗಳೂರು: ಆತಿಥೇಯ ತಂಡವನ್ನು ಅಮೋಘ ಆಟದ ಮೂಲಕ ಮಣಿಸಿದ ಬೆಂಗಳೂರಿನ ರಾಮಯ್ಯ ಸಂಸ್ಥೆಯ (ಎಂಎಸ್‌ಆರ್‌ಐಟಿ) ತಂಡ ಅಖಿಲ ಭಾರತ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು. ಮಣಿಪಾಲ ತಾಂತ್ರಿಕ ಸಂಸ್ಥೆ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಎಂಎಸ್‌ಆರ್‌ಐಟಿ 57–32ರಲ್ಲಿ ಮಣಿಪಾಲ ಎಂಐಟಿ ತಂಡವನ್ನು ಮಣಿಸಿತು. ಪ್ರೀತಮ್ ಮತ್ತು ಪ್ರದ್ಯುಮ್ನ ಗಳಿಸಿದ ತಲಾ 18 ಮತ್ತು 15 ಪಾಯಿಂಟ್‌ಗಳು ಎಂಎಸ್‌ಆರ್‌ಐಟಿ ತಂಡದ ಕೈ ಹಿಡಿದವು. ಮಣಿಪಾಲ ತಂಡಕ್ಕಾಗಿ ನಮನ್ 14 ಮತ್ತು ನಿಪುಣ್ 12 ಪಾಯಿಂಟ್ ಕಲೆ ಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.