ಟೆನಿಸ್‌ ಟೂರ್ನಿ: ಅಂಕಿತಾ, ಋತುಜಾ ಮಿಂಚು: ಭಾರತಕ್ಕೆ ಜಯ ಅಂಟಲ್ಯಾ, ಟರ್ಕಿ: ಭಾರತ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಮೊದಲ ಜಯ ಗಳಿಸಿದೆ. ಗುರುವಾರ ರಾತ್ರಿ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ 2–0ಯಿಂದ ಟರ್ಕಿ ತಂಡದ ಎದುರು ಮೇಲುಗೈ ಸಾಧಿಸಿತು. ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಹಣಾಹಣಿಯಲ್ಲಿ ಭಾರತದ ಋತುಜಾ ಭೋಸ್ಲೆ 6–4, 6–1ರಿಂದ ಬೀಟ್‌ರೈಸ್‌ ಗುಮುಲ್ಯ ಅವರನ್ನು ಸೋಲಿಸಿದರು. 23 ನಿಮಿಷಗಳ ಹಣಾಹಣಿಯಲ್ಲಿ ಋತುಜಾ ಅವರಿಗೆ ಗೆಲುವು ಒಲಿಯಿತು. 52 ನಿಮಿಷಗಳ ಕಾಲ ನಡೆದ ಎರಡನೇ ಪಂದ್ಯದಲ್ಲಿ ಅಂಕಿತಾ ರೈನಾ6-1, 6-2ರಿಂದ ಆಲ್ದಿಲಾ ಸುಜಿಯಾದಿ ಅವರನ್ನು ಮಣಿಸಿದರು. ಏಷ್ಯಾ/ಒಸೀನಿಯಾ ಗುಂಪಿನ ಮೊದಲ ಪಂದ್ಯದಲ್ಲಿ ಚೀನಾ ತಂಡದ ಎದುರು ಭಾರತ 0–3ರಿಂದ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.