ಕ್ರೀಡಾ ಇಲಾಖೆಗೆ ಎನ್‌ಎಚ್‌ಆರ್‌ಸಿ ನೋಟಿಸ್‌ ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಸೇರಿದಂತೆ ಕೆಲವು ಫೆಡರೇಷನ್‌ಗಳು ಆಂತರಿಕ ದೂರು ಸಮಿತಿಯನ್ನು ನೇಮಿಸದ ಕಾರಣ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ), ಕೇಂದ್ರ ಕ್ರೀಡಾ ಇಲಾಖೆಗೆ ಗುರುವಾರ ನೋಟಿಸ್‌ ನೀಡಿದೆ. ಭಾರತ ಕ್ರೀಡಾ ಪ್ರಾಧಿಕಾರ, ಬಿಸಿಸಿಐ ಮತ್ತು ಡಬ್ಲ್ಯುಎಫ್‌ಐ ಸೇರಿದಂತೆ ಇತರ ಕೆಲವು ಕ್ರೀಡಾ ಫೆಡರೇಷನ್‌ಗಳಿಗೂ ನೋಟಿಸ್‌ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ. ‘ಆಂತರಿಕ ದೂರು ಸಮಿತಿ ರಚಿಸದೇ ಇರುವ ಮತ್ತು ಸಮಿತಿ ಇದ್ದರೂ, ಅವು ಸಕ್ರಿಯವಾಗಿ ಕೆಲಸ ಮಾಡದ ಫೆಡರೇಷನ್‌ಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ಆಯೋಗದ ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.