ಏಷ್ಯಾ ಕಪ್ ಜೂನಿಯರ್ ಹಾಕಿ: ಭಾರತ ತಂಡಕ್ಕೆ ಪ್ರೀತಿ ನಾಯಕಿ ನವದೆಹಲಿ (ಪಿಟಿಐ): ಪ್ರತಿಭಾವಂತ ಡಿಫೆಂಡರ್ ಪ್ರೀತಿ ಅವರನ್ನು ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಫಾರ್ವರ್ಡ್ ಆಟಗಾರ್ತಿ ದೀಪಿಕಾ ಉಪನಾಯಕಿಯಾಗಿದ್ದಾರೆ. ಬುಧವಾರ ಹಾಕಿ ಇಂಡಿಯಾ ಪ್ರಕಟಿಸಿದ ತಂಡದಲ್ಲಿ ಒಟ್ಟು 18 ಆಟಗಾರ್ತಿಯರು ಸ್ಥಾನ ಗಳಿಸಿದ್ದಾರೆ. ಈ ತಂಡವು ಜೂನ್ 2ರಿಂದ ಜಪಾನ್ ದೇಶದ ಕಾಕಾಮಿಗಾಹರಾದಲ್ಲಿ ನಡೆಯಲಿರುವ ಜೂನಿಯರ್ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದೆ. ಎ ಗುಂಪಿನಲ್ಲಿರುವ ಭಾರತ ತಂಡವು ಕೊರಿಯಾ, ಮಲೇಷ್ಯಾ, ತೈಪೆ ಹಾಗೂ ಉಜ್ಬೇಕಿಸ್ತಾನ ತಂಡಗಳನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಆತಿಥೇಯ ಜಪಾನ್, ಚೀನಾ, ಕಜಕಸ್ತಾನ, ಹಾಂಕಾಂಗ್ ಮತ್ತು ಇಂಡೋನೆಷ್ಯಾ ತಂಡಗಳಿವೆ. ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ತಂಡಗಳು ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಲಿವೆ. ತಂಡ: ಡಿಫೆಂಡರ್ಸ್: ಪ್ರೀತಿ (ನಾಯಕಿ), ಮಹಿಮಾ ಟೆಟೆ, ನೀಲಂ, ರೊಪ್ನಿ ಕುಮಾರಿ, ಅಂಜಲಿ ಬರ್ವಾ, ಮಿಡ್‌ಫೀಲ್ಡರ್ಸ್‌: ಋತುಜಾ ದಾದಸೊ ಪಿಸಾಲ್, ಮಂಜು ಚೊರಾಸಿಯಾ, ಜ್ಯೋತಿ ಚಟ್ರಿ, ವೈಷ್ಣವಿ ವಿಠಲ್ ಫಲ್ಕೆ, ಸುಜಾತಾ ಕುಜುರ್, ಮನಶ್ರೀ ನರೇಂದ್ರ ಶೇಡಗೆ, ಫಾರ್ವರ್ಡ್ಸ್: ಮುಮ್ತಾಜ್ ಖಾನ್, ದೀಪಿಕಾ (ಉಪನಾಯಕಿ), ದೀಪಿಕಾ ಸೊರೆಂಗ್, ಅನು, ಸುನಿಲಿತಾ ಟೊಪೊ. ಗೋಲ್‌ ಕೀಪರ್ಸ್: ಮಾಧುರಿ ಕಿಂಡೊ, ಅದಿತಿ ಮಹೇಶ್ವರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.