ಸಬ್‌ಜೂನಿಯರ್ ಕುಸ್ತಿ: ಪರಶುರಾಮ್, ಕೀರ್ತನ್‌ಗೆ ಕಂಚು ಬೆಂಗಳೂರು: ಕರ್ನಾಟಕದ ಪರಶುರಾಮ ಮತ್ತು ಕೀರ್ತನ್ ಡಿ.ಸಿ ರಾಷ್ಟ್ರೀಯ ಸಬ್‌ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಪರಶುರಾಮ್ 48 ಕೆಜಿ ವಿಭಾಗದ ಫ್ರೀಸ್ಟೈಲ್ ಮತ್ತು ಕೀರ್ತನ್‌ 48 ಕೆಜಿ ವಿಭಾಗದ ಗ್ರೀಕೊ ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ದಾವಣಗೆರೆ ಕ್ರೀಡಾ ವಸತಿನಿಯಲದ ವಿದ್ಯಾರ್ಥಿಗಳಾಗಿರುವ ಇವರಿಗೆ ಕೆ. ವಿನೋದ್‌ ಕುಮಾರ್ ತರಬೇತಿ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.