ಕ್ವಾರ್ಟರ್‌ಫೈನಲ್‌ಗೆ ಭಾರತೀಯಾನಾ ಬೆಂಗಳೂರು: ಭಾರತೀಯಾನಾ ಬಿ. ರೆಡ್ಡಿ ಅವರು ಮೂರನೇ ಶ್ರೇಯಾಂಕದ ಉಮಾಮ್ ಅಹಮ್ಮದ್ ಅವರಿಗೆ ಸೋಲುಣಿಸಿ ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈಲ್ ತಲುಪಿದರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಂಗಳವಾರ ಭಾರತೀಯಾನಾ ಅವರಿಗೆ7-5, 6-2ರಿಂದ ಗೆಲುವು ಒಲಿಯಿತು. ಬಾಲಕಿಯರ ವಿಭಾಗದ 16ರ ಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಅಮೋದಿನಿ ನಾಯಕ್‌7-6 (5), 6-0ರಿಂದ ಕಾಶ್ವಿ ಸುನಿಲ್ ಎದುರು, ಧರಣಿ ಧನ್ಯಾಟ6-4, 6-4ರಿಂದ ಪಾಣಿಗ್ರಹಿ ಆಯುಷಿ ವಿರುದ್ಧ, ಸುಶ್ಮಿತಾ ರವಿ6-1, 6-2ರಿಂದ ಅರ್ಚಿಶಾ ಘೋಷ್‌ ಎದುರು, ವರುಣ್ಯಾ ನವೀನ್‌1-6, 6-3, 10-8ರಿಂದ ದಿಶಾ ಸಂತೋಷ್ ವಿರುದ್ಧ, ಅನುಷ್ಕಾ ಗರಿಮೆಲ್ಲಾ6-7 (5), 6-3, 10-1ರಿಂದ ಅವ್ವಾಯಿ ವಿವೇಕಾನಂದ ಎದುರು, ಮೇಘನಾ ಜಿ.ಡಿ6-3, 6-0ರಿಂದ ಜೆನಿಫರ್ ಚಾಕೊ ವಿರುದ್ಧ, ಶ್ರೀ ತನ್ವಿ ದಾಸರಿ ಅವರು ದಿಶಾ ಬೆಹರಾ ವಿರುದ್ಧ ಗೆದ್ದರು. ಬಾಲಕರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಮನದೀಪ್ ರೆಡ್ಡಿ6-0, 6-3ರಿಂದ ಶ್ರೀಶರಣ್ ಕನುಗೇವಿ ಎದುರು, ವಿಶಾಲ್ ವಾಸುದೇವ್‌7-5, 6-2ರಿಂದ ವಿಷ್ಣು ಬಾಲಚಂದ್ರ ಎದುರು, ಆರ್ಯ ಗಣಪತಿ6-3, 7-6ರಿಂದ ಆರ್ಯಂತ್‌ ಆರ್‌. ಚಿಂತರಪಲ್ಲಿ ಎದುರು, ಅಕ್ಷಯ್ ಪ್ರಸಾದ್‌6-2, 6-2ರಿಂದ ಕಿರಿಲ್‌ ಗೋಲುಬ್ವೆಸ್‌ ಎದುರು, ಸೆಹವಾಗ್‌ ಎಂ. ಗೊವಿನ್‌6-3, 6-4ರಿಂದ ಸುಹಾಸ್ ಸೋಮಾ ಎದುರು, ಆರಾಧ್ಯ ದ್ವಿವೇದಿ6-3, 6-0ರಿಂದ ಅಶ್ವಿನ್ ಶಿವಶಂಕರ್ ಎದುರು, ಯಶಸ್‌ ಪಂಚಾಕ್ಷರಿ6-0, 6-1ರಿಂದ ಪ್ರಿಯಾಂಶ್‌ ಸೋಲಂಕಿ ಎದುರು, ಖಾಂಡವೇಲ್ ಎಂ 6-2, 6-2ರಿಂದ ಅರಿಹಂತ್ ಕೌಲ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.