ಮೇಘನಾಗೆ ಮಣಿದ ಶ್ರೀತನ್ವಿ ಬೆಂಗಳೂರು: ಎರಡನೇ ಶ್ರೇಯಾಂಕದ ಶ್ರೀತನ್ವಿ ದಾಸರಿ ಅವರಿಗೆ ಸೋಲುಣಿಸಿದ ಮೇಘನಾ ಜಿ.ಡಿ, ಇಲ್ಲಿ ನಡೆಯುತ್ತಿರುವ ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಬುಧವಾರ ನಡೆದ ಬಾಲಕಿಯರ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಮೇಘನಾ6-1, 6-3ರಿಂದ ಶ್ರೀತನ್ವಿ ವಿರುದ್ಧ ಗೆದ್ದರು. ಎಂಟರಘಟ್ಟದ ಮತ್ತೊಂದು ಪಂದ್ಯದಲ್ಲಿ ಅನುಷ್ಕಾ ಗೆರಿಮೆಲ್ಲಾ 5–7, 2–6ರಿಂದ ವರುಣ್ಯಾ ನವೀನ್ ಎದುರು ಸೋತರು. ಬಾಲಕಿಯರ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಅಮೋದಿನಿ ನಾಯಕ್‌6-0, 6-4ರಿಂದ ಧರಣಿ ಧನ್ಯಾಟ ಎದುರು, ಸುಶ್ಮಿತಾ ರವಿ3-6, 6-4, 6-3ರಿಂದ ಭಾರತೀಯಾನಾ ಬಿ. ರೆಡ್ಡಿ ಎದುರು ಗೆದ್ದು ಮುನ್ನಡೆದರು. ಬಾಲಕರ ವಿಭಾಗದಲ್ಲಿ ಮನದೀಪ್ ರೆಡ್ಡಿ ಕುದುಮಾಲ5-7, 6-2, 6-4ರಿಂದ ವಿಶಾಲ್ ವಾಸುದೇವ್ ಎದುರು, ಆರ್ಯ ಗಣಪತಿ ಕಳ್ಳಂಬೆಳ್ಳ6-3, 6-2ರಿಂದ ಅಕ್ಷಯ್ ಪ್ರಸಾದ್‌ ಎದುರು, ಆರಾಧ್ಯ ದ್ವಿವೇದಿ7-6 (3), 6-4ರಿಂದ ಸೆಹವಾಗ್‌ ಎಂ. ಗೊವಿನ್ ವಿರುದ್ಧ, ಖಾಂಡವೇಲ್ ಎಂ.6-2, 6-0ರಿಂದ ಯಶ್ ಪಂಚಾಕ್ಷರಿ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.