ಫೆಡರೇಷನ್ ಕಪ್ ನೆಟ್‌ಬಾಲ್: ಕರ್ನಾಟಕ ತಂಡಕ್ಕೆ ಕಂಚು ಬೆಂಗಳೂರು: ಕರ್ನಾಟಕ ಪುರುಷರ ತಂಡವು ಫೆಡರೇಷನ್ ಕಪ್‌ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಹರಿಯಾಣದ ಭಿವಾನಿಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಛತ್ತೀಸಗಡ ತಂಡದೊಂದಿಗೆ ಕರ್ನಾಟಕ ಡ್ರಾ ಸಾಧಿಸಿತು. ಇದರೊಂದಿಗೆ ಜಂಟಿ ಮೂರನೇ ಸ್ಥಾನ ಗಳಿಸಿತು. ಸೆಮಿಫೈನಲ್‌ಗೆ ಮಹಿಳಾ ತಂಡ: ಎರಡು ಪಂದ್ಯಗಳನ್ನು ಕರ್ನಾಟಕ ಮಹಿಳಾ ತಂಡವು ಸೆಮಿಫೈನಲ್‌ ತಲುಪಿತು. ಮೊದಲ ಪಂದ್ಯದಲ್ಲಿ ಛತ್ತೀಸಗಡ ಎದುರು 37–26ರಿಂದ, ಎರಡನೇ ಪಂದ್ಯದಲ್ಲಿ 26–10ರಿಂದ ಹಿಮಾಚಲ ಪ್ರದೇಶ ವಿರುದ್ಧ ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.