ನೆಟ್‌ಬಾಲ್: ಕರ್ನಾಟಕ ಮಹಿಳೆಯರಿಗೆ ಕಂಚು ಬೆಂಗಳೂರು: ಕರ್ನಾಟಕ ಮಹಿಳಾ ತಂಡವು ಫೆಡರೇಷನ್ ಕಪ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಹರಿಯಾಣದ ಭಿವಾನಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಮೂರನೇ ಸ್ಥಾನವನ್ನು ಉತ್ತರಪ್ರದೇಶದೊಂದಿಗೆ ಹಂಚಿಕೊಂಡಿತು. ಕಂಚಿನ ಪದಕದ ಸುತ್ತಿನಲ್ಲಿ ಉಭಯ ತಂಡಗಳು 33–33ರಿಂದ ಸಮಬಲ ಸಾಧಿಸಿದವು. ಸೆಮಿಫೈನಲ್‌ನಲ್ಲಿ ಕರ್ನಾಟಕ 47–49ರಿಂದ ದೆಹಲಿ ತಂಡದ ಎದುರು ಸೋತಿತ್ತು. ಕಂಚಿನ ಪದಕ ಜಯಿಸಿದ ಕರ್ನಾಟಕ ತಂಡ: (ಎಡದಿಂದ)ಕುಶಲಾ ಎನ್. ಭೂಷಣ್, ಲಯ ಕೆ ಬಿ, ಸುರಭಿ ಬಿ.ಆರ್, ಯಶಸ್ವಿನಿ ಎಂ, ವಿದ್ಯಾಶ್ರೀ ಜೆ, ಶಿವಲೀಲಾ ಎಸ್, ಪ್ರಿಯಾ ಎಂ, ಭಾವನಾ ಆರ್, ಸಚಿತಾ ಎಸ್. ಎಂ, ಗಗನಾ ಕೆ. ಎಸ್, ಎಂ.ಮಹಾಲಕ್ಷ್ಮಿ, ದೀಪಾ ಟಿ. ಆರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.