ಖೇಲೊ ಇಂಡಿಯಾ: ದಾಖಲೆಯೊಂದಿಗೆ ಚಿನ್ನ ಗೆದ್ದ ಜೈನ್ ವಿವಿಯ ಶಿವ ಶ್ರೀಧರ್ ಬೆಂಗಳೂರು: ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟದ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಜೈನ್ ವಿವಿಯ ಶಿವ ಶ್ರೀಧರ್ ದಾಖಲೆಯೊಂದಿಗೆ ಚಿನ್ನ ಗೆದ್ದರು.‌ ಜೈನ್ ವಿವಿ ಆವರಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಅವರು 2 ನಿಮಿಷ 5.43 ಸೆಕೆಂಡುಗಳಲ್ಲಿ‌ ಗುರಿ‌ ಮುಟ್ಟಿದರು. 400 ಮೀಟರ್ಸ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ವಿ.ವರ್ಷಾ ಚಿನ್ನದ ಪದಕ ಗಳಿಸಿದರು. ಅವರು 4 ನಿಮಿಷ, 59.63 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈಜಿನಲ್ಲಿ ಮೊದಲ ಚಿನ್ನ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ಶುಭಂ ದೈಗುಡೆ ಅವರ ಪಾಲಾಯಿತು.‌ ಪುರುಷರ 400 ಮೀ ಫ್ರೀಸ್ಟೈಲ್ ನಲ್ಲಿ ಅವರು 4 ನಿಮಿಷ 27.67 ಸೆಕೆಂಡುಗಳ ಸಾಧನೆ‌ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.