ಖೇಲೊ ಇಂಡಿಯಾ ವಿವಿ ಕ್ರೀಡಾಕೂಟ: ಆ್ಯನ್ ದಾಖಲೆ; ಜೈನ್ ಮೇಲುಗೈ ಬೆಂಗಳೂರು: ವೇಟ್‌ಲಿಫ್ಟಿಂಗ್‌ನ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಆ್ಯನ್ ಮರಿಯ ರಾಷ್ಟ್ರೀಯ ದಾಖಲೆ ಬರೆದ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ನಾಲ್ಕನೇ ದಿನ ಆತಿಥೇಯ ಜೈನ್‌ ವಿವಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಹಾಲಿ ರಾಷ್ಟ್ರೀಯ ಚಾಂಪಿಯನ್ ಆ್ಯನ್ ಮರಿಯ, ಜೈನ್‌ ವಿವಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ಮಹಿಳೆಯರ 87 ಕೆಜಿ ವಿಭಾಗದಲ್ಲಿ ಒಟ್ಟು 230 ಕೆಜಿ (101+129) ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ರಾಷ್ಟ್ರೀಯ ದಾಖಲೆ ಮುರಿದರು. 55 ಕೆಜಿ ವಿಭಾಗದಲ್ಲಿ ಲಕ್ಷ್ಮಿ ಕಂಚಿನ ಪದಕ ಗಳಿಸಿದರು. ಇವರಿಬ್ಬರೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಆತಿಥೇಯ ಜೈನ್ ಕಾಲೇಜು ಬುಧವಾರವೂ ಪಾರಮ್ಯ ಮುಂದುವರಿಸಿತು. 11 ಚಿನ್ನದೊಂದಿಗೆ ಒಟ್ಟು 17 ಪದಕ ಗಳಿಸಿರುವ ಜೈನ್ ವಿವಿ ಚಿನ್ನ ಗಳಿಕೆಯಲ್ಲಿ ಎರಡಂಕಿ ಮೊತ್ತ ದಾಟಿದ ಮೊದಲ ತಂಡ ಎನಿಸಿಕೊಂಡಿತು. ಮುಂಬೈ ವಿವಿಯನ್ನು ಹಿಂದಿಕ್ಕಿದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ 5 ಚಿನ್ನದೊಂದಿಗೆ 18 ಪದಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್‌, ಮದ್ರಾಸ್‌, ಅಣ್ಣಾ ಮತ್ತು ಮುಂಬೈ ವಿವಿಗಳು ಕೂಡ ತಲಾ 5 ಚಿನ್ನ ಗಳಿಸಿವೆ. ಕರ್ನಾಟಕದ 8 ವಿವಿಗಳು ಪದಕ ಪಟ್ಟಿಯಲ್ಲಿ ಸೇರಿಕೊಂಡಿವೆ. ಬುಧವಾರ 5 ಕೂಟ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆ ನಿರ್ಮಾಣವಾಯಿತು. ನಾಲ್ಕನೇ ದಿನದ ಫಲಿತಾಂಶಗಳು: ಈಜು: ಪುರುಷರ 400 ಮೀ ವೈಯಕ್ತಿಕ ಮೆಡ್ಲೆ: ಶಿವ ಶ್ರೀಧರ್ (ಜೈನ್ ವಿವಿ)–1. ಕಾಲ: 4:38.98 (ಕೂಟ ದಾಖಲೆ. ಹಳೆಯದು: 4:47.13, ಶಿವ ಶ್ರೀಧರ್); ಸಿದ್ಧಾಂತ್ ಸೇಜ್ವಾಲ್‌ (ಪಂಜಾಬ್‌ ವಿವಿ)–2, ಜತಿನ್ (ಬೆಂಗಳೂರು ವಿವಿ)–3; 4x100 ಮೀ ಮೆಡ್ಲೆ ರಿಲೆ:ಅಣ್ಣಾ ವಿವಿ–1.ಕಾಲ: 3:55.07 (ಕೂಟ ದಾಖಲೆ. ಹಳೆಯದು: 4:06.53, ಡೆಲ್ಲಿ ವಿವಿ), ಜೈನ್ ವಿವಿ–2, ಅದಮಾಸ್‌ ವಿವಿ–3; 200 ಮೀ ಫ್ರೀಸ್ಟೈಲ್‌: ಅನುರಾಗ್ ದಾಗಾರ್ (ಪಂಜಾಬ್‌)–1. ಕಾಲ: 1:55.75 (ಕೂಟ ದಾಖಲೆ. ಹಳೆಯದು: 2:01.28, ಸಿದ್ಧಾಂತ್ ಸೇಜ್ವಾಲ್), ಸತ್ಯಸಾಯಿ ಕೃಷ್ಣನ್ (ಮದ್ರಾಸ್‌)–2, ಗೌರವ್ ಚವಾಣ್ (ಶಿವಾಜಿ)–3; 100 ಮೀ ಬಟರ್‌ಫ್ಲೈ: ಶಿವ ಶ್ರೀಧರ್‌ (ಜೈನ್‌)–1. ಕಾಲ: 56.26 (ಕೂಟ ದಾಖಲೆ. ಹಳೆಯದು: 56.76, ಮಹಿರ್ ಆಮ್ರೆ), ಆರ್ಯನ್ ಪಾಂಚಾಲ್ (ಗುಜರಾತ್)–2, ಸಮೀರ್ ಸೇಜ್ವಾಲ್ (ಪಂಜಾಬ್‌)–3. ಮಹಿಳೆಯರ 800 ಮೀ ಫ್ರೀಸ್ಟೈಲ್: ಪ್ರೀತಾ (ಬೆಂಗಳೂರು)–1. ಕಾಲ: 10:10.15, ವರ್ಷಾ (ಮದ್ರಾಸ್)–2, ಅಭಿಷಿಕ್ತ (ರಾಮಚಂದ್ರ ಸಂಸ್ಥೆ)–3; 200 ಮೀ ಬಟರ್‌ಫ್ಲೈ: ಕಲ್ಯಾಣಿ ಸಕ್ಸೇನ (ನರ್ಮದಾ)–1. ಕಾಲ: 2:31.98, ಸುಚೇತನ (ನಿರ್ಮಾ)–2, ಸೃಷ್ಟಿ ಉಪಾಧ್ಯ (ಜಾಧವಪುರ್)–3; 200 ಮೀ ಫ್ರೀಸ್ಟೈಲ್: ವರ್ಷಾ (ಮದ್ರಾಸ್‌)–1. ಕಾಲ: 2:18.26 ಸಾಧ್ವಿ ದುರಿ (ಪುಣೆ)–2, ಪ್ರೀತ (ಬೆಂಗಳೂರು)–3; 100 ಮೀ ಬಟರ್‌ಫ್ಲೈ: ಸೃಷ್ಟಿ ಉಪಾಧ್ಯ (ಜಾಧವಪುರ್)–1. ಕಾಲ: 1:06.69 (ಕೂಟ ದಾಖಲೆ. ಹಳೆಯದು: 1:07.36, ಸಾಧ್ವಿ ದುರಿ); ದಾಮಿನಿಗೌಡ (ರಾಜೀವ್‌ ಗಾಂಧಿ)–2, ಡಾಲ್ಫಿ ಸಾರಂಗ್‌ (ನರ್ಮದಾ)–3; 4x100 ಮೀ ಮೆಡ್ಲೆ: ಮದ್ರಾಸ್‌–1. ಕಾಲ: 4:59.17, ಜಾಧವಪುರ್–2, ಜೈನ್‌–3. ವೇಟ್‌ಲಿಫ್ಟಿಂಗ್‌: ಮಹಿಳೆಯರ 87+ ಕೆಜಿ: ಆ್ಯನ್ ಮರಿಯ (ಮಂಗಳೂರು)–1. ಭಾರ: 101+129ಕೆಜಿ; ಒಟ್ಟು 230 ಕೆಜಿ (ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ರಾಷ್ಟ್ರೀಯ ದಾಖಲೆ. ಹಳೆಯದು: 128 ಕೆಜಿ, ಮನ್‌ಪ್ರೀತ್ ಕೌರ್, ರಾಷ್ಟ್ರೀಯ ಚಾಂಪಿಯನ್‌ಷಿಪ್‌ 2022); ಸತ್ಯಜ್ಯೋತಿ (ನಾಗಾರ್ಜುನ)–2, ಮುಸ್ಕಾನ್ ಸಿಂಗ್ (ಕುರುಕ್ಷೇತ್ರ)–3; ಪುರುಷರ 109+ ಕೆಜಿ: ರುದ್ರಮಾಯನ್ (ಮನೋನ್ಮಣಿಯಂ)–1. ಭಾರ: 150+176ಕೆಜಿ; ಒಟ್ಟು 326 ಕೆಜಿ, ಕುಶಾಲ್‌ ಗೌಡ (ಜೈನ್‌)–2, ಅಖಿಲ್‌ ಸಾರಂಗಿ (ನಾಗಾರ್ಜುನ)–3. ಶೂಟಿಂಗ್‌: 10 ಮೀ ಏರ್‌ ರೈಫಲ್ ಮಿಶ್ರ ತಂಡ: ಸಾವಿತ್ರಿಬಾಯಿ ಫುಲೆ ವಿವಿ–1, ಮಣಿಪಾಲ್ ವಿವಿ–2, ಕುರುಕ್ಷೇತ್ರ–3; ಟ್ರ್ಯಾಪ್ ಮಿಶ್ರ ತಂಡ: ಮಾನವ್ ರಚನಾ ವಿವಿ–1, ಡೆಲ್ಲಿ–2, ಗುರುನಾನಕ್–3. ಬ್ಯಾಡ್ಮಿಂಟನ್‌: ಜೈನ್ ವಿವಿ–1, ಎಸ್‌ಆರ್‌ಎಂ–2, ಸಾವಿತ್ರಿಬಾಯಿ ಫುಲೆ–3; ಮಹಿಳೆಯರ ವಿಭಾಗ: ಜೈನ್‌–1, ಮದುರೈ–2, ಎಸ್‌ಆರ್‌ಎಂ–3; ಬ್ಯಾಸ್ಕೆಟ್‌ಬಾಲ್‌: ಪುರುಷರ ವಿಭಾಗ: ಪಂಜಾಬ್‌ ವಿವಿಗೆ ಜಾಮಿಯಾ ಇಸ್ಲಾಮಿಯಾ ವಿರುದ್ಧ 85-84ರಲ್ಲಿ ಜಯ. ಮಹಿಳಾ ವಿಭಾಗ: ಮದ್ರಾಸ್ ವಿವಿಗೆ ಎಸ್‌ಆರ್‌ಎಂ ವಿವಿ ವಿರುದ್ಧ 65-48ರಲ್ಲಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.