129 ಕೆಜಿ ಭಾರ ಎತ್ತಿದ ಆಳ್ವಾಸ್‌ ಕಾಲೇಜಿನ ಆ್ಯನ್‌ ಮರಿಯಾ ರಾಷ್ಟ್ರೀಯ ದಾಖಲೆ ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ಮಂಗಳೂರು ವಿಶ್ವವಿದ್ಯಾಲಯದ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ಆ್ಯನ್‌ ಮರಿಯಾ ಅವರುರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಜೈನ್ ವಿವಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ಮಹಿಳೆಯರ ವೇಟ್ ಲಿಫ್ಟಿಂಗ್ ನ 87+ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ ಅವರ ದಾಖಲೆ‌ ಮೂಡಿತು. ಅವರು 129 ಕೆಜಿ ಭಾರ ಎತ್ತಿದರು. ಒಟ್ಟಾರೆ 230 ಕೆಜಿ ಎತ್ತಿ ಚಿನ್ನದ ಪದಕ ಗೆದ್ದುಕೊಂಡರು. ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ 128 ಕೆಜಿ ಭಾರ ಎತ್ತಿದ ಮನ್ ಪ್ರೀತ್ ಕೌರ್ ಹೆಸರಿನಲ್ಲಿ ಈ ವರೆಗೆ ರಾಷ್ಟ್ರೀಯ ದಾಖಲೆ ಇತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.