ಚೆಸ್‌: ಮುನ್ನಡೆಯಲ್ಲಿ ಸಮಕ್ಷ್‌ ಅಶೋಕ್‌ ಬೆಂಗಳೂರು: ಸಮಕ್ಷ್‌ ಅಶೋಕ್‌ ಅವರು 9 ವರ್ಷದೊಳಗಿನವರ ರಾಜ್ಯ ಚೆಸ್‌ ಟೂರ್ನಿಯಲ್ಲಿ ಬಾಲಕರ ವಿಭಾಗದಲ್ಲಿ ಐದು ಪಂದ್ಯಗಳ ಬಳಿಕ ಮುನ್ನಡೆ ಸಾಧಿಸಿದ್ಧಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚೆಸ್‌ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಹೊಸಕೋಟೆ ತಾಲ್ಲೂಕಿನ ದೊಡ್ಡ ದುನ್ನಸಂದ್ರದ ಶೃಂಗ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬೆಂಗಳೂರಿನ ಸಮಕ್ಷ್‌ ಐದು ಪಾಯಿಂಟ್ಸ್‌ ಕಲೆಹಾಕಿದ್ದಾರೆ. ತಲಾ 4.5 ಪಾಯಿಂಟ್ಸ್‌ ಗಳಿಸಿರುವ ಅಭಿನವ್‌ ಆನಂದ್‌, ವೆಂಕಟ ನಾಗ ಮತ್ತು ವಿಯಾನ್‌ ಬನ್ಚೋರ್ ಅವರು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಅಭಿನವ್‌ ಮತ್ತು ವೆಂಕಟ ನಾಗ ನಡುವಣ ಶನಿವಾರ ನಡೆದ ಐದನೇ ಸುತ್ತಿನ ಪಂದ್ಯ ಡ್ರಾ ಆಯಿತು. ಬಾಲಕಿಯರ ವಿಭಾಗದಲ್ಲಿ ನಾಲ್ಕು ಪಂದ್ಯಗಳ ಬಳಿಕ ಬೆಂಗಳೂರಿನ ಲಿಯಾ ಆರ್‌. ಜೋಸೆಫ್‌, ಶಿವಮೊಗ್ಗದ ಸನ್ವಿತಾ ಎ. ಶೆಟ್ಟಿ ಮತ್ತು ಕೋಲಾರದ ಕೆ.ಆರ್‌.ಸೌಖ್ಯ ಅವರು ತಲಾ 4 ಪಾಯಿಂಟ್ಸ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.