ಬೆಂಗಳೂರು ವಿಶ್ವ 10ಕೆ: ಇದ್ರಿಸ್‌, ಒಬಿರಿ ಆಕರ್ಷಣೆ ಬೆಂಗಳೂರು: 5000 ಮೀಟರ್ಸ್‌ ಓಟದ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಹಾಲಿ ವಿಶ್ವ ಚಾಂಪಿಯನ್‌ಗಳಾಗಿರುವ ಮುಕ್ತಾರ್ ಇದ್ರಿಸ್‌ ಮತ್ತು ಹೆಲೆನ್ ಒಬಿರಿ ಅವರು ಟಿಸಿಎಸ್‌ ಬೆಂಗಳೂರು ವಿಶ್ವ 10ಕೆ ಸ್ಪರ್ಧೆಗೆ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಉದ್ಯಾನನರಿಯಲ್ಲಿ ಮೇ 15ರಂದು ನಡೆಯಲಿರುವ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಇಥಿಯೋಪಿಯಾದ ಇದ್ರಿಸ್‌ ಮತ್ತು ಕೆನ್ಯಾದ ಹೆಲೆನ್‌ ಸ್ಪರ್ಧಿಸಲಿದ್ದಾರೆ ಎಂದು 10ಕೆ ಪ್ರಾಯೋಜಕ ಸಂಸ್ಥೆ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ಬುಧವಾರ ತಿಳಿಸಿದೆ. 5000 ಮೀಟರ್ಸ್‌ನಲ್ಲಿ ಎರಡು ಬಾರಿ ವಿಶ್ವಚಾಂಪಿಯನ್‌ಷಿಪ್ ಗೆದ್ದಿರುವ ಇದ್ರಿಸ್‌, ಈ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದು, ಬೆಂಗಳೂರು ಸ್ಪರ್ಧೆಯನ್ನು ಪೂರ್ವಸಿದ್ಧತೆಯಾಗಿ ಬಳಸಿಕೊಳ್ಳಲಿದ್ದಾರೆ. ಹೆಲೆನ್ ಕೂಡ ಎರಡು ಕಳೆದ ಎರಡು ವಿಶ್ವಚಾಂಪಿಯನ್‌ಷಿಪ್‌ಗಳ 5000 ಮೀಟರ್ಸ್‌ ಓಟದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.