ವಿಶ್ವ ಚೆಸ್‌: ಕೌಶಿಕ್‌ಗೆ ಪ್ರಶಸ್ತಿ ರೋಡ್ಸ್, ಗ್ರೀಸ್‌: ಭಾರತದ ಅಶ್ವತ್ಥ್‌ ಕೌಶಿಕ್ ಇಲ್ಲಿ ನಡೆದ ವಿಶ್ವ ಕೆಡೆಟ್ಸ್ ಮತ್ತು ಯೂತ್‌ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನ ಎಂಟು ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾನೆ. ಆರು ವರ್ಷದ ಕೌಶಿಕ್‌ಚಾಂಪಿಯನ್‌ಷಿಪ್‌ನ ಒಂಬತ್ತು ಸುತ್ತುಗಳಲ್ಲಿ ಅಜೇಯವಾಗುಳಿದನು. ಒಟ್ಟು 8.5 ಪಾಯಿಂಟ್ಸ್ ಕಲೆಹಾಕಿದನು. ಜಯದ ಹಾದಿಯಲ್ಲಿ ಕೌಶಿಕ್, ಅಗ್ರಶ್ರೇಯಾಂಕದ ಕೆನಡಾದ ಮೊದಿತ್ ಅರೋಹ್‌ ಮುತ್ಯಾಲಪತಿ ಮತ್ತು ನೆದರ್ಲೆಂಡ್ಸ್‌ನ ರಾಘವ್ ಪಾಠಕ್‌ ಅವರನ್ನು ಸೋಲಿಸಿದನು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.