ರೋಲರ್‌ ಸ್ಕೇಟಿಂಗ್‌: ಮಿಂಚಿದ ಸಿದ್ಧಾರ್ಥ್‌, ಏಕಾಂಶ್‌ ಬೆಂಗಳೂರು: ಕರ್ನಾಟಕದ ಸಿದ್ಧಾರ್ಥ್‌ ಜಯಕುಮಾರ್ ಮತ್ತು ಏಕಾಂಶ್ ಕುಮಾರ್ ಅವರುಮೊಹಾಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ರೋಲರ್ಸ್ಕೇಟಿಂಗ್‌ ಗೇಮ್ಸ್‌ನಲ್ಲಿ ತಲಾ ಮೂರು ಮತ್ತು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸಿದ್ಧಾರ್ಥ್‌ ಸಹೋದರ್ ಚಿನ್ಮಯ್‌ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಸಿದ್ದಾರ್ಥ್‌ ಮತ್ತು ಚಿನ್ಮಯ್ ಅವರು ರಾಘವೇಂದ್ರ ಮತ್ತು ಆನಂದ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎರಡು ಚಿನ್ನ ಮತ್ತು ಒಂದು ಕಂಚು ಜಯಿಸಿರುವ ಏಕಾಂಶ್‌ ಬೆಂಗಳೂರಿನ ಹೊಸಕೆರೆಹಳ್ಳಿಯ ನವೀನ್ ಕುಮಾರ್ ಮತ್ತು ಸೌಮ್ಯಾ ಅವರ ಪುತ್ರ. ಏಕಾಂಶ್, ಪ್ರತೀಕ್ ರಾಜ ಬಳಿ ತರಬೇತಿ ಪಡೆಯುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.