ಡೆಫಿಲಿಂಪಿಕ್ಸ್: ಕಂಚು ಗೆದ್ದ ವೇದಿಕಾ ನವದೆಹಲಿ: ವೇದಿಕಾ ಶರ್ಮಾ ಅವರು ಡೆಫಿಲಿಂಪಿಕ್ಸ್‌ನ ಶೂಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟರು. ಬ್ರೆಜಿಲ್‌ನ ಕ್ಯಾಕ್ಸಿಯಾಸ್‌ ಡು ಸುಲ್‌ನಲ್ಲು ನಡೆಯುತ್ತಿರುವ ಕೂಟದ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್‌ನಲ್ಲಿ ವೇದಿಕಾ ಕಂಚು ಜಯಿಸಿದರು. ವೇದಿಕಾ 207.2 ಸ್ಕೋರ್ ದಾಖಲಿಸಿದರು. ಚಿನ್ನದ ಪದಕವು ಉಕ್ರೇನ್‌ನ ಇನ್ನಾ ಅಫೊಂಚೆಂಕೊ (236.3) ಅವರ ಪಾಲಾಯಿತು. ಚೀನಾ ತೈಪೆಯ ಕಾವೊ ಯಾ ಜು (232) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬ್ಯಾಡ್ಮಿಂಟನ್‌ನಲ್ಲಿ ಮಿಶ್ರ ವಿಭಾಗದ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ಭಾರತ ಗೆದ್ದ ಪದಕಗಳ ಸಂಖ್ಯೆ ನಾಲ್ಕಕೇರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.