ಥಾಮಸ್ ಕಪ್ ಸಾಧನೆ: ಕೋಚ್‌ ವಿಮಲ್‌ಗೇಕಿಲ್ಲ ಬಹುಮಾನ? ಬೆಂಗಳೂರು: ಥಾಮಸ್ ಕಪ್ ಗೆದ್ದು ಭಾರತ ತಂಡದ ಆಟಗಾರ ಲಕ್ಷ್ಯ ಸೇನ್ ಅವರಿಗೆ ₹5 ಲಕ್ಷ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಘೋಷಿಸಿದ್ದರು. ಮಂಗಳವಾರ ತಮ್ಮ ಮಾತನ್ನು ಈಡೇರಿಸಿಯೂಬಿಟ್ಟರು. ಥಾಯ್ಲೆಂಡ್‌ನಿಂದ ಮರಳಿದ ಲಕ್ಷ್ಯ ಸೇನ್ ಅವರಿಗೆ ₹ 5 ಲಕ್ಷ ಚೆಕ್ ನೀಡಿ ಸನ್ಮಾನಿಸಿದರು. ಅವರೊಂದಿಗೆ ತಂಡದ ಕೋಚ್ ಮತ್ತು ಮ್ಯಾನೇಜರ್ ವಿಮಲ್ ಕುಮಾರ್ ಮತ್ತು ಲಕ್ಷ್ಯ ಅವರ ತಂದೆ, ತಾಯಿಯನ್ನು ಗೌರವಿಸಿದರು. ಆದರೆ, ಅನುಭವಿ ಕೋಚ್ ವಿಮಲ್ ಅವರಿಗೆ ನಗದು ಬಹುಮಾನ ನೀಡದಿರುವುದು ಈಗ ಕ್ರೀಡಾವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎರಡು ಬಾರಿ ಮಾಜಿ ರಾಷ್ಟ್ರೀಯ ಚಾಂಪಿಯನ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿರುವ ವಿಮಲ್ ಅವರು ಇದುವರೆಗೆ ಹಲವು ಪ್ರತಿಭಾವಂತರಿಗೆ ತರಬೇತಿ ನೀಡಿದ್ದಾರೆ. ಲಕ್ಷ್ಯ ಸೇನ್ ಗೂ ಅವರೇ ಮಾರ್ಗದರ್ಶನ ನೀಡಿದ್ದಾರೆ. 73 ವರ್ಷಗಳಲ್ಲಿ ಭಾರತವು ಇದೇ ಮೊದಲ ಸಲ ಥಾಮಸ್ ಕಪ್ ಜಯಿಸಿದೆ. ಓದಿ...ಥಾಮಸ್ ಕಪ್ ವಿಜೇತ ಲಕ್ಷ್ಮ ಸೇನ್‌ಗೆ ₹5 ಲಕ್ಷ ಬಹುಮಾನ ಘೋಷಿಸಿದ ಸಿಎಂ ಬೊಮ್ಮಾಯಿ ಮುಖ್ಯಮಂತ್ರಿ @ ಅವರು ಬ್ಯಾಂಕಾಕ್ ನಲ್ಲಿ ನಡೆದ #ThomasCup2022 ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ರೂ. 5 ಲಕ್ಷ ಮೊತ್ತದ ಬಹುಮಾನದ ಚೆಕ್ ನ್ನು ವಿತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ @ ಉಪಸ್ಥಿತರಿದ್ದರು‌. ../6iVbeaoFXU ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.