ಸಬ್‌ ಜೂನಿಯರ್ ಹಾಕಿ: ಕರ್ನಾಟಕ ತಂಡಕ್ಕೆ ದಿಶಾ ನಾಯಕಿ ಬೆಂಗಳೂರು: ದಿಶಾ ಪೊನ್ನಮ್ಮ ಎಂ.ಯು. ಅವರು ರಾಷ್ಟ್ರೀಯ ಸಬ್‌ಜೂನಿಯರ್ ಮಹಿಳೆಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಮಣಿಪುರದ ಇಂಫಾಲ್‌ನಲ್ಲಿ ಬುಧವಾರದಿಂದ ಇದೇ 22ರವರೆಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಿಗದಿಯಾಗಿದೆ. ಕರ್ನಾಟಕ ತಂಡವು ಬಿಹಾರ, ಮಿಜೋರಾಂ ಮತ್ತು ತೆಲಂಗಾಣ ತಂಡಗಳು ಇರುವ ಎಚ್‌ ಗುಂಪಿನಲ್ಲಿ ಸ್ಥಾನ ಪಡೆದಿದೆ. ತಂಡ ಇಂತಿದೆ: ದಿಶಾ ಪೊನ್ನಮ್ಮ ಎಂ.ಯು. (ನಾಯಕಿ),ಅಕ್ಕಮ್ಮ ಜಿ. ಬಡಿಗೇರ್,ಬೊಳ್ಳಮ್ಮ ಪಿ.ಎಂ,ಚತುರ್ಥಿ ಡಿ.ಎ, ದೇವಿಕಾ ಎನ್,ದಿಶಾ ಎಂ,ದ್ರವ್ಯ ಎಂ. ಗೌಡ,ಹರ್ಷಿತಾ ಎಚ್‌.ಎಚ್. (ಗೋಲ್‌ಕೀಪರ್‌),ಲಿಖಿತಾ ಪಿ.ಜೆ,ಮನೀಷಾ ಪೊನ್ನಮ್ಮ ಸಿ.ಡಿ,ಮೇಘವತಿ,ನಿಧಿ ನೀಲಮ್ಮ ಪಿ.ಎಸ್,ರಕ್ಷಿತಾ ಜೆ,ರಶ್ಮಿ ಎಂ,ಶ್ರಾವ್ಯ ಪಿ.ಡಿ (ಗೋಲ್‌ಪೀರ್‌),ಸೌಮ್ಯ ಎಚ್.ವಿ,ಸುಪ್ರಿತಾ ಎಸ್,ಯಮುನಾ. ಕೋಚ್‌: ಧರ್ಮೇಂದ್ರ ಜಿ.ಆರ್. ಮ್ಯಾನೇಜರ್: ಹೇಮಲಕ್ಷ್ಮಿ ಬಿ.ಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.