ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ ಕ್ಲಿಫ್ಟನ್‌, ನ್ಯೂಜೆರ್ಸಿ: ಬೆಂಗಳೂರಿನ ಅದಿತಿ ಅಶೋಕ್‌ ಅವರು ಎಲ್‌ಪಿಜಿಎ ಟೂರ್‌ನ ಫೌಂಡರ್ಸ್‌ ಕಪ್‌ ಗಾಲ್ಫ್‌ ಟೂರ್ನಿಯ ಮೊದಲ ಸುತ್ತಿನ ಬಳಿಕ ಜಂಟಿ 12ನೇ ಸ್ಥಾನದಲ್ಲಿದ್ದಾರೆ. ಇಲ್ಲಿನ ಅಪ್ಪರ್‌ ಮಾಂಟ್‌ಕ್ಲೇರ್‌ ಕಂಟ್ರಿ ಕ್ಲಬ್‌ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಮೊದಲ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಅವರು 69 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು. ಇತರ 12 ಸ್ಪರ್ಧಿಗಳೊಂದಿಗೆ ಅದಿತಿ, 12ನೇ ಸ್ಥಾನ ಹಂಚಿಕೊಂಡಿದ್ದಾರೆ. ಕೊರಿಯಾದ ಸಿ ಯಾಂಗ್ ಕಿಮ್‌ (66) ಮತ್ತು ಹಾಯೆ ರಾನ್‌ ರ್‍ಯು (67) ಅವರು ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ತಲಾ 68 ಸ್ಟ್ರೋಕ್‌ಗಳೊಂದಿಗೆ ಇತರ ಒಂಬತ್ತು ಸ್ಪರ್ಧಿಗಳು ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.