: ಐತಿಹಾಸಿಕ ಗೆಲುವು, ಇತಿಹಾಸ ನಿರ್ಮಿಸಿದ ಭಾರತ ಬ್ಯಾಂಕಾಕ್: ಫೈನಲ್‌ನಲ್ಲಿ ಬಲಿಷ್ಠ ಇಂಡೋನೇಷ್ಯಾ ವಿರುದ್ಧ ಅಮೋಘ ಗೆಲುವು ದಾಖಲಿಸಿರುವ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಬ್ಯಾಡ್ಮಿಂಟನ್ ಇತಿಹಾಸದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಭಾರತವು ಹಾಲಿ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಐತಿಹಾಸಿಕ ಸಾಧನೆ ಮಾಡಿರುವ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. 🥺❤️ & # 1️⃣ , 14 🇮🇩 3-0 😎 ' ! 🫶🏻#TUC2022#ThomasCup2022### ../GQ9pQmsSvP ಥಾಮಸ್ ಕಪ್‌ನಲ್ಲಿ ಬಲಿಷ್ಠ ತಂಡ ಇಂಡೋನೇಷ್ಯಾ ಒಟ್ಟು 14 ಬಾರಿ ಪ್ರಶಸ್ತಿ ಜಯಿಸಿದೆ. ಸಿಂಗಲ್ಸ್‌ನಲ್ಲಿ ಲಕ್ಷ್ಮಸೇನ್ ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ವಿರುದ್ಧ ಗೆಲುವು ದಾಖಲಿಸಿ ಮಹತ್ವದ 1-0 ಮುನ್ನಡೆ ಗಳಿಸಿದರು. ಬಳಿಕ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗೆ ಶೆಟ್ಟಿ ಜೋಡಿ ಗೆದ್ದು ಸಂಭ್ರಮಿಸಿದರು. ಕೊನೆಯಲ್ಲಿ ಕಿದಂಬಿ ಶ್ರೀಕಾಂತ್, ಗೆಲುವು ದಾಖಲಿಸುವದರೊಂದಿಗೆ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. 🇮🇳 ! ’ ’ ! , , , . 1/2 ../P3bTgsdtOS 🕺🥳 & ❤️#TUC2022#ThomasCup2022### ../ ! ! . . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.