ಫುಟ್‌ಬಾಲ್‌: ಲಿವರ್‌ಪೂಲ್‌ಗೆ ಎಫ್‌ಎ ಕಪ್‌ ಕಿರೀಟ ಲಂಡನ್‌:ಲಿವರ್‌ಪೂಲ್ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಚೆಲ್ಸಿ ತಂಡಕ್ಕೆ ಸೋಲುಣಿಸಿ ಫುಟ್‌ಬಾಲ್ ಅಸೋಸಿಯೇಷನ್ ಚಾಲೆಂಜ್‌ ಕಪ್‌ (ಎಫ್‌ಎ ಕಪ್‌) ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಇಲ್ಲಿಯ ವಿಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಲಿವರ್‌ಪೂಲ್‌ 6–5ರಿಂದ ಚೆಲ್ಸಿಗೆ ಸೋಲುಣಿಸಿತು. 120 ನಿಗದಿತ ಅವಧಿಯಲ್ಲಿ ಉಭಯ ತಂಡಗಳಿಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶೂಟೌಟ್‌ ಮೊರೆಹೋಗಲಾಗಿತ್ತು. ಎರಡು ವಾರಗಳ ಬಳಿಕ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ರಿಯಲ್ ಮ್ಯಾಡ್ರಿಡ್‌ ಎದುರು ಸೆಣಸಬೇಕಿರುವ ಲಿವರ್‌ಪೂಲ್‌ ತಂಡಕ್ಕೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. 1923ರ ಬಳಿಕ ಇದೇ ಮೊದಲ ಬಾರಿ ಟೂರ್ನಿಯ ಫೈನಲ್ ಪಂದ್ಯದ ನಿಗದಿತ ಅವಧಿ ಗೋಲುರಹಿತವಾಗಿತ್ತು. 2006ರ ಬಳಿಕ ಲಿವರ್‌ಪೂಲ್ ತಂಡವಿ ಈ ಪ್ರಶಸ್ತಿ ಜಯಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.