ಇಂಡಿಯನ್ ಗ್ರ್ಯಾನ್‌ಪ್ರಿ 3 ಅಥ್ಲೆಟಿಕ್ಸ್| ಅಭಾ, ಮನ್‌ಪ್ರೀತ್ ಕೌರ್ ಮೇಲೆ ಕಣ್ಣು ಭುವನೇಶ್ವರ್: ದೇಶದ ಪ್ರಮುಖ ಅಥ್ಲೀಟ್‌ಗಳ ಅನುಪಸ್ಥಿತಿಯಲ್ಲಿ ಇಂಡಿಯನ್‌ ಗ್ರ್ಯಾನ್‌ ಪ್ರಿ 3 ಅಥ್ಲೆಟಿಕ್ಸ್ ಶನಿವಾರ ಇಲ್ಲಿ ಆರಂಭವಾಗಲಿದೆ. ಪ್ರಮುಖ ಅಥ್ಲೀಟ್‌ಗಳು ವಿದೇಶಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿ ಪುರುಷರ ಟ್ರಿಪಲ್ ಜಂಪ್ ಮತ್ತು ಮಹಿಳೆಯರ ಥ್ರೊ ಸ್ಪರ್ಧೆಗಳು ಕೂಟದ ಪ್ರಮುಖ ಆಕರ್ಷಣೆಗಳಾಗಲಿವೆ. ಶಾಟ್‌ಪಟ್‌ ಪಟುಗಳಾದ ಅ‌ಭಾ ಕಥುವಾ, ಮನ್‌ಪ್ರೀತ್ ಕೌರ್‌, ಡಿಸ್ಕಸ್‌ ಥ್ರೊ ಅಥ್ಲೀಟ್‌ ನವಜೀತ್ ಕೌರ್‌, ಹ್ಯಾಮರ್ ಥ್ರೊನಲ್ಲಿ ಸರಿತಾ ರಮಿತ್ ಸಿಂಗ್‌ ಮೇಲೆ ಕಣ್ಣು ನೆಟ್ಟಿದೆ. ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್‌ ಪೌಲ್‌, ಅಬ್ದುಲ್ಲಾ ಅಬೂಬಕರ್‌, ಕಾರ್ತಿಕ್ ಉನ್ನಿಕೃಷ್ಣನ್‌ ಮತ್ತು ಗೌಲಿ ವೆನಿಸ್ಟರ್‌ ದೇವಸಹಾಯಮ್‌ ಪೈಪೋಟಿ ನಡೆಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.