ಜಾವೆಲಿನ್‌ ಥ್ರೋನಲ್ಲಿ ವಿಶ್ವದ ನಂ.1 ಪಟ್ಟಕ್ಕೇರಿದ ಒಲಿಂಪಿಕ್ ಸಾಧಕ ನೀರಜ್ ಚೋಪ್ರಾ ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ವಿಶ್ವದ ನಂಬರ್‌ ಒನ್‌ ಜಾವೆಲಿನ್ ಎಸೆತಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 25 ವರ್ಷ ವಯಸ್ಸಿನ ನೀರಜ್‌ ಚೋಪ್ರಾ ಅವರು 1,455 ಅಂಕಗಳೊಂದಿಗೆ, ವಿಶ್ವದ ಜಾವೆಲಿನ್‌ ಎಸೆತಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 1,433 ಅಂಕ ಗಳಿಸಿರುವ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಅರ್ಷದ್ ನದೀಮ್ ಐದನೇ ಶ್ರೇಯಾಂಕ ಪಡೆದಿದ್ದಾರೆ. ನೀರಜ್‌ ಚೋಪ್ರಾ ಅವರು, ಮೇ 4ರಂದು 88.67-ಮೀಟರ್ ಎಸೆತದೊಂದಿಗೆ ದೋಹಾ ಡೈಮಂಡ್ ಲೀಗ್‌ ಗೆದ್ದಿದ್ದರು. ಈ ಮೂಲಕ 2023ರ ಋತುವಿನಲ್ಲಿ ಶುಭಾರಂಭ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.