ವಿಶ್ವ ಟಿಟಿ: ಪ್ರಿ ಕ್ವಾರ್ಟರ್‌ ಫೈನಲ್‌ಗೆ ಸತ್ಯನ್‌ ಡರ್ಬನ್‌: ಭಾರತದ ಜಿ. ಸತ್ಯನ್‌ ಅವರು ಶರತ್‌ ಕಮಲ್‌ ಮತ್ತು ಮಣಿಕಾ ಬಾತ್ರಾ ಅವರ ಜತೆಗೂಡಿ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಡಬಲ್ಸ್‌ ಹಾಗೂ ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಸೋಮವಾರ ನಡೆದ 32ರ ಸುತ್ತಿನ ಪಂದ್ಯದಲ್ಲಿ ಸತ್ಯನ್‌– ಶರತ್‌ ಜೋಡಿ 11-5, 11-4, 15-13 ರಲ್ಲಿ ಡೆನ್ಮಾರ್ಕ್‌ನ ಬೆನ್ಸಿ ಮೆಯೊರೊಸ್‌– ಆ್ಯಂಡರ್ಸ್‌ ಲಿಂಡ್‌ ಅವರನ್ನು ಮಣಿಸಿತು. ಬಳಿಕ ನಡೆದ ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಸತ್ಯನ್‌– ಮಣಿಕಾ 8-11, 11-7, 11-6, 11-6 ರಲ್ಲಿ ಬ್ರೆಜಿಲ್‌ನ ಎರಿಕ್‌ ಜೌತಿ– ಲುಕಾಕುಮಹರ ಅವರನ್ನು ಸೋಲಿಸಿತು. ಶರತ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲಿ 11-4, 13-11, 11-8, 12-10 ರಲ್ಲಿ ಕೊರಿಯಾದ ಲೀ ಸಾಂಗ್ ಸು ಎದುರು ಪರಾಭವಗೊಂಡರೆ, ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಶ್ರೀಜಾ ಅಕುಲಾ 2-11, 4-11, 2-11, 4-11 ರಲ್ಲಿ ಜರ್ಮನಿಯ ಯಿಂಗ್‌ ಹಾನ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.