ಟೇಬಲ್‌ ಟೆನಿಸ್: ಸಬ್‌ ಜೂನಿಯರ್‌, ಕೆಡೆಟ್‌ ತಂಡಗಳು ಪ್ರಕಟ ಬೆಂಗಳೂರು: ಇಂದೋರ್‌ನಲ್ಲಿ ನಡೆಯಲಿರುವ ಸಬ್‌ ಜೂನಿಯರ್ ಮತ್ತು ಕೆಡೆಟ್ ವಿಭಾಗದ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ವಿಭಾಗದ ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ. ಮೂರು ವಯೋಮಾನದ ಟೂರ್ನಿ ಇದೇ 26ರಿಂದ ಜೂನ್ 1ರ ವರೆಗೆ ಅಭಯ್ ಪ್ರಶಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ಜಿ.ಉಪಾಧ್ಯ ತಿಳಿಸಿದ್ದಾರೆ. ತಂಡಗಳು: 15 ವರ್ಷದೊಳಗಿನ ಬಾಲಕರು: ಅಭಿನವ್‌ ಮೂರ್ತಿ, ವರುಣ್ ಕಶ್ಯಪ್, ಹೃಷಿಕೇಶ್ ಶೆಟ್ಲೂರ್‌, ತೇಶುಭ್ ದಿನೇಶ್; ಬಾಲಕಿಯರು: ನಿಹಾರಿಕಾ ಎ, ಸಾನ್ವಿ ಮಾಂಡೇಕರ್‌, ಪರ್ಣವಿ ಎಚ್‌.ಎ. ನೀತಿ ಅಗರವಾಲ್‌; 13 ವರ್ಷದೊಳಗಿನ ಬಾಲಕಿಯರು: ಆಯುಷಿ ಗೋಡ್ಸೆ, ವೃಷಾಲಿ ಕಿಣಿ, ಸಾನ್ವಿ ಮಾಂಡೇಕರ್‌, ಕೈರಾ ಬಾಳಿಗ; 11 ವರ್ಷದೊಳಗಿನ ಬಾಲಕರು: ರೆಯಾಂಶ್‌ ಜಲನ್, ಅಭಿನವ್ ಪ್ರಸನ್ನ, ತನಿಷ್ಕಾ ಕಾಳಭೈರವ್‌, ರಾಶಿ ರಾವ್‌. ದಿನೇಶ್‌ ಜೆ: ಬಾಲಕರ ವಿಭಾಗದ ಕೊಚ್‌, ಮ್ಯಾನೇಜರ್‌; ಸಂಗಮ್ ಬೈಲೂರು: ಬಾಲಕಿಯರ ವಿಭಾಗದ ಕೊಚ್‌, ಮ್ಯಾನೇಜರ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.